ನವದೆಹಲಿ: ಭಾರತ ಇಲ್ಲದಿದ್ದರೆ ಪ್ರಸ್ತುತ ಇರುವ ತಮ್ಮ ಬ್ರ್ಯಾಂಡ್ನ(ಹೆಸರು, ಖ್ಯಾತಿ) ಅರ್ಧದಷ್ಟನ್ನು ತಮ್ಮ ಜೀವನದಲ್ಲಿ ಗಳಿಸಲು ಆಗುತ್ತಿರಲಿಲ್ಲ ಎಂದು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ವೇನ್ ಬ್ರಾವೋ ಹೇಳಿದ್ದಾರೆ. ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದಶಕಕ್ಕೂ ಹೆಚ್ಚು ಕಾಲ ಆಡಿರುವ ಡ್ವೇನ್ ಬ್ರಾವೋ, ತಾನು ಭಾರತೀಯರಿಂದ ಪಡೆದಿರುವ ಪ್ರೀತಿ ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಡ್ವೇನ್ ಬ್ರಾವೋ ಇದೀಗ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮದೇ ಆದ 'ಡಿಜೆಬಿ47' ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಅನ್ನು ಆರಂಭಿಸಿದ್ದಾರೆ. ಪ್ರಸ್ತುತ ಇದು ಆನ್ಲೈನ್ನಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ವರ್ಷ ಭಾರತದಲ್ಲಿ ತಮ್ಮದೇ ಆದ ಮಳಿಗೆಯನ್ನು ತೆರೆಯಲಿದ್ದಾರೆ.
"ಭಾರತ ನನಗೆ ತುಂಬಾ ವಿಶೇಷ, ಭಾರತ ವಿಲ್ಲದಿದ್ದರೆ ನಾನು ಈಗಿರುವ ಅರ್ಧದಷ್ಟು ಹೆಸರನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಪ್ರಾಮಾಣಿಕ ಸತ್ಯ ಮತ್ತು ನನ್ನ ಮನೆಯಿಂದ ತುಂಬಾ ದೂರದಲ್ಲಿರುವ ದೇಶದಲ್ಲಿ ನನಗೆ ಇಂತಹ ಉಪಸ್ಥಿತಿ ಸಿಕ್ಕಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇಲ್ಲಿನ ಜನರಿಂದ ನಾನು ಗಳಿಸಿಕೊಂಡಿರುವ ಪ್ರೀತಿ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಅದರಿಂದಾಗಿಯೇ ನಾನು ಕ್ರಿಕೆಟ್ ಅಥವಾ ಮ್ಯೂಸಿಕ್ ಅಥವಾ ಉಡುಪುಗಳಾಗಿರಬಹುದು, ಏನೇ ಹೊಸದಾಗಿ ಆರಂಭಿಸಿದರೂ ಅದನ್ನು ಭಾರತೀಯರ ಮುಖಾಂತರ ನಡೆಸಲು ಬಯಸುತ್ತೇನೆ" ಎಂದು ಬ್ರಾವೋ ಐಎಎನ್ಎಸ್ಗೆ ತಿಳಿಸಿದ್ದಾರೆ.
ತಮ್ಮ ನೂತನ ಬ್ರ್ಯಾಂಡ್ ಬಗ್ಗೆ ಮಾತನಾಡಿ, ಈ ಫ್ಯಾಷನ್ ಬ್ರ್ಯಾಂಡ್ ತುಂಬಾ ಟ್ರೆಂಡ್ಗೆ ಹತ್ತಿರವಾಗಿದೆ. ಯುವಕರು, ಮಕ್ಕಳು ಮತ್ತು ಪೋಷಕರು ಧರಿಸುವಂತಹ ಬಟ್ಟೆಗಳನ್ನು ಡಿಜೆ ಬ್ರಾವೋ ಬ್ರಾಂಡ್ ತಯಾರಿಸಲಿದೆ. ಆಶಾದಾಯಕವಾಗಿ ಇದನ್ನು ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆರಿಬಿಯನ್ ಮತ್ತು ಯುಎಸ್ನಾದ್ಯಂತ ವಿಸ್ತರಿಸುವುದು ನಮ್ಮ ಗುರಿ ಎಂದಿದ್ದಾರೆ.
ಇದನ್ನೂ ಓದಿ:Vijay Hazare trophy: ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ಗಾಯಕ್ವಾಡ್ ನಾಯಕ