ETV Bharat / sports

ಟಿ20 ವಿಶ್ವಕಪ್​ ಸೆಮೀಸ್​ ರೇಸ್​ನಿಂದ ಪಾಕಿಸ್ತಾನ ಔಟ್ ​?​.. ಹೀಗಾದ್ರೆ ಮಾತ್ರ ಮುಂದಿನ ಹಂತಕ್ಕೆ ಲಗ್ಗೆ - ಈಟಿವಿ ಭಾರತ ಕನ್ನಡ

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಸೋತ ಪಾಕಿಸ್ತಾನವು ಟೂರ್ನಿಯಿಂದ ಹೊರ ಬೀಳುವ ಆತಂಕದಲ್ಲಿದೆ. ಪಾಕ್​ನ ಸೆಮಿಫೈನಲ್​ ತಲುಪುವ ಕನಸು ಕಮರುವ ಸಾಧ್ಯತೆ ಹೆಚ್ಚಾಗಿದೆ.

How Pakistan can qualify for T20 World Cup semi-finals after bitter defeat to Zimbabwe
ಟಿ20 ವಿಶ್ವಕಪ್‌
author img

By

Published : Oct 28, 2022, 7:58 AM IST

Updated : Oct 28, 2022, 12:43 PM IST

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡವು ಸೂಪರ್ 12 ಹಂತದ ಪಂದ್ಯದಲ್ಲಿ ಪಾಕ್​ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ಜೊತೆ ಸೋತ ಪಾಕಿಸ್ತಾನವು ಜಿಂಬಾಬ್ವೆ ನೀಡಿದ 131 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಲು ವಿಫಲವಾಗಿ ಸೋಲುಂಡಿದೆ. ಸದ್ಯ ಪಾಕ್​ ತಂಡವು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ.

ಜಿಂಬಾಬ್ವೆ ವಿರುದ್ಧದ 1 ರನ್​ ಅಂತರದ ಸೋಲಿನ ಬಳಿಕ ಪಾಕಿಸ್ತಾನದ​ ಸೆಮಿಫೈನಲ್​ ಕನಸು ಮಳೆ ಹಾಗೂ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಜಿಂಬಾಬ್ವೆ ಗೆಲುವು ಗ್ರೂಪ್​ 2ರಲ್ಲಿನ ಪೈಪೋಟಿಯನ್ನು ಇನ್ನಷ್ಟು ಹೆಚ್ಚಿಸಿದೆ. ಪಾಕ್​ ಸೆಮಿಫೈನಲ್‌ ಅರ್ಹತೆ ಪಡೆಯಲು ಈ ಕೆಳಗಿನ ಕೆಲ ಅಂಶಗಳು ಪ್ರಮುಖ ಪಾತ್ರವಹಿಸಲಿವೆ.

  • ಮೊದಲನೆಯದಾಗಿ, ಪಾಕಿಸ್ತಾನವು ಟೂರ್ನಿಯಲ್ಲಿ ತನ್ನ ಇನ್ನುಳಿದ ಮೂರು ಪಂದ್ಯಗಳನ್ನೂ ಸಹ ಗೆಲ್ಲಲೇಬೇಕಾಗಿದೆ.
  • ಉತ್ತಮ ರನ್ ರೇಟ್​​ ಕಾಪಾಡಿಕೊಳ್ಳಲು ಪಾಕ್​​ ಎಲ್ಲ ಮೂರು ಪಂದ್ಯಗಳನ್ನು ಬೃಹತ್​​ ಅಂತರದಿಂದ ಜಯಿಸಬೇಕು.
  • ದಕ್ಷಿಣ ಆಫ್ರಿಕಾವು ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಸೋಲಬೇಕಿದೆ. ಅಲ್ಲದೆ, ಇತರ ಪಂದ್ಯದ ಫಲಿತಾಂಶಗಳ ಮೇಲೆಯೂ ಪಾಕ್​ ಅವಲಂಬಿತವಾಗಿದೆ.
  • ಜಿಂಬಾಬ್ವೆ ತನ್ನ ಉಳಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ (ಭಾರತ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ವಿರುದ್ಧ) ಸೋಲಬೇಕು.
  • ಇದಲ್ಲದೇ, ಬಾಂಗ್ಲಾದೇಶ ಮುಂದಿನ ಇನ್ನೊಂದು ಪಂದ್ಯದಲ್ಲಿಯೂ ಸೋಲು ಕಾಣಬೇಕಿದೆ.
  • ಒಂದು ವೇಳೆ ಯಾವುದಾದರೂ ಪಂದ್ಯಗಳು ಮಳೆಯಿಂದ ರದ್ದಾದರೂ ಸಹ ಆಗ ಅದು ಪಾಕ್​ಗೆ ವರವಾಗಿ ಪರಿಣಮಿಸಬಹುದು. ಇಲ್ಲವೇ ಹಿನ್ನಡೆಗೂ ಕಾರಣವಾಗಬಹುದಾಗಿದೆ.

ಗ್ರೂಪ್​ 2, ಸೂಪರ್ 12 ಹಂತದ ಉಳಿದ ಪಂದ್ಯಗಳು:

  • ಅಕ್ಟೋಬರ್ 30 - ಬಾಂಗ್ಲಾದೇಶ vs ಜಿಂಬಾಬ್ವೆ, ನೆದರ್ಲ್ಯಾಂಡ್ಸ್ vs ಪಾಕಿಸ್ತಾನ ಮತ್ತು ಭಾರತ vs ದಕ್ಷಿಣ ಆಫ್ರಿಕಾ
  • ನವೆಂಬರ್ 2 - ಜಿಂಬಾಬ್ವೆ vs ನೆದರ್ಲ್ಯಾಂಡ್ಸ್ ಮತ್ತು ಭಾರತ vs ಬಾಂಗ್ಲಾದೇಶ
  • ನವೆಂಬರ್ 3 - ಪಾಕಿಸ್ತಾನ ವಿರುದ್ಧ vs ಆಫ್ರಿಕಾ
  • ನವೆಂಬರ್ 6 - ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್, ಪಾಕಿಸ್ತಾನ vs ಬಾಂಗ್ಲಾದೇಶ ಮತ್ತು ಭಾರತ vs ಜಿಂಬಾಬ್ವೆ

ಇದನ್ನೂ ಓದಿ: ಪಾಕ್​ಗೆ ಮತ್ತೆ ನವಾಜ್​ ವಿಲನ್! ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು

Last Updated : Oct 28, 2022, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.