ETV Bharat / sports

ಮುಂದಿನ ಎರಡು ಪಂದ್ಯಗಳಿಗೆ ಹಾರ್ದಿಕ್​ ಪಾಂಡ್ಯ ಅಲಭ್ಯ: ಸೆಮಿ-ಫೈನಲ್​​​ಗೆ ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆ - ETV Bharath Karnataka

ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡುವ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ಚೇತರಿಸಿಕೊಳ್ಳಲು ಇನ್ನಷ್ಟೂ ದಿನಗಳು ಬೇಕಾಗಬಹುದು ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ.

Hardik Pandya
Hardik Pandya
author img

By PTI

Published : Oct 25, 2023, 3:19 PM IST

ಹೈದರಾಬಾದ್​ : ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂದಿನ ಎರಡು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಟೀಮ್​ ಇಂಡಿಯಾ ವಿಶ್ವಕಪ್​ನ ಲೀಗ್​ ಹಂತದಲ್ಲಿ ಮುಂದೆ ಅಕ್ಟೋಬರ್ 29 ರಂದು ಲಕ್ನೋದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ನಂತರ ನವೆಂಬರ್ 2 ರಂದು ಮುಂಬೈನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಲಕ್ನೋದಲ್ಲಿ ಆಂಗ್ಲರ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಬಹುತೇಕ ಅಲಭ್ಯರಾಗಿರುತ್ತಾರೆ ಮತ್ತು ಅವರು ತಂಡದೊಂದಿಗೆ ಪ್ರವಾಸದಲ್ಲೂ ಇರುವುದಿಲ್ಲ. ಮುಂಬೈ ಪಂದ್ಯದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ.

ಪುಣೆಯ ಎಮ್​ಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್‌ನ ಭಾರತದ ನಾಲ್ಕನೇ ಲೀಗ್ ಪಂದ್ಯದಲ್ಲಿ ಬೌಲಿಂಗ್​ ಮಾಡುವಾಗ ಎಡ ಪಾದದ ನೋವಿನಿಂದ ಬಳಲಿದರು. ಓವರ್​​ನ ಮೂರು ಬಾಲ್​ ಮಾಡಿದ್ದ ಅವರು ನಂತರ ಮೈದಾನದಿಂದ ಹೊರ ನಡೆದಿದ್ದರು. ಅವರ ಓವರ್​ನ್ನು ಮಾಜಿ ನಾಯಕ ವಿರಾಟ್​ ಮುಂದುವರೆಸಿದ್ದರು. ಇದರ ಪರಿಣಾಮವಾಗಿ ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಬಾಂಗ್ಲಾ ಪಂದ್ಯದ ನಂತರ ಹಾರ್ದಿಕ್​ ಅವರನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವೈದ್ಯಕೀಯ ಚಿಕಿತ್ಸೆಗೆ ಕರೆತರಲಾಗಿತ್ತು.

ವರದಿ ಒಂದರ ಪ್ರಕಾರ ಉಪನಾಯಕ ಹಾರ್ದಿಕ್​ ಲೀಗ್​ನ ಕೊನೆಯ ಎರಡು ಪಂದ್ಯದ ವೇಳೆಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಅಂದರೆ ನ.5 ದಕ್ಷಿಣ ಆಫ್ರಿಕಾ ಮತ್ತು ನ.12 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ಆಡುವ ನಿರೀಕ್ಷೆ ಇದೆ. ಸೆಮಿ-ಫೈನಲ್ ವೇಳೆಗೆ ಸಂಪೂರ್ಣ ಫಿಟ್​ ಆಗಿರುವ ಉದ್ದೇಶದಿಂದ ಹಾರ್ದಿಕ್​ ಚೇತರಿಕೆಗೆ ಬೇಕಾದಷ್ಟು ಸಮಯವನ್ನು ಕೊಡುವ ಬಗ್ಗೆ ಬಿಸಿಸಿಐ ಚಿಂತಿಸಿದೆ ಎಂದು ಸಹ ಹೇಳಲಾಗಿದೆ. ಹಾರ್ದಿಕ್​ ಸಂಪೂರ್ಣ ಫಿಟ್​ ಆಗುವವರೆಗೆ ಎನ್​ಸಿಎಯಲ್ಲಿ ವೈದ್ಯಕೀಯ ನಿಗಾದಲ್ಲಿರಲಿದ್ದಾರೆ.

ಆತಿಥೇಯ ಭಾರತವು ನಡೆಯುತ್ತಿರುವ ಪುರುಷರ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ತಂಡಕ್ಕೆ ಇನ್ನೊಂದೇ ಗೆಲುವು ಸಿಕ್ಕರೂ ಪ್ಲೇ ಆಫ್​ಗೆ ಕ್ವಾಲಿಫೈ ಆಗಲಿದೆ. ಹಾರ್ದಿಕ್​ ಹೊರತಾಗಿರೂ ನ್ಯೂಜಿಲೆಂಡ್​ ವಿರುದ್ಧ ಸಮತೋಲನದ ಪ್ರದರ್ಶನವನ್ನು ತಂಡ ನೀಡಿದೆ.

ಇದನ್ನು ಓದಿ: ವಿಶ್ವಕಪ್ 2023​: ಮಥೀಷ ಪತಿರಾಣ ಸ್ಥಾನಕ್ಕೆ ಅನುಭವಿ ಆಲ್​ರೌಂಡರ್ ಏಂಜಿಲೊ ಮ್ಯಾಥ್ಯೂಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.