ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರ ಪತ್ನಿ ಹೇಜಲ್ ಕೀಚ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶುಕ್ರವಾರ, ಯುವಿ ತಮ್ಮ ಪತ್ನಿ, ಮಗ ಮತ್ತು ಮಗಳೊಂದಿಗೆ ಫೋಟೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೊದಲು ಅವರ ಸಂಬಂಧಿಕರು ಮತ್ತು ಆಪ್ತರನ್ನು ಹೊರತುಪಡಿಸಿ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ. ಮಾಹಿತಿ ನೀಡಿದ ಅವರು, ಈಗ ಮಗಳು ಹುಟ್ಟಿದ ನಂತರ ಅವರ ಕುಟುಂಬ ಪೂರ್ಣಗೊಂಡಿದೆ ಎಂದು ಬರೆದಿದ್ದಾರೆ.
-
Sleepless nights have become a lot more joyful as we welcome our little princess Aura and complete our family ❤️ @hazelkeech pic.twitter.com/wHxsJuNujY
— Yuvraj Singh (@YUVSTRONG12) August 25, 2023 " class="align-text-top noRightClick twitterSection" data="
">Sleepless nights have become a lot more joyful as we welcome our little princess Aura and complete our family ❤️ @hazelkeech pic.twitter.com/wHxsJuNujY
— Yuvraj Singh (@YUVSTRONG12) August 25, 2023Sleepless nights have become a lot more joyful as we welcome our little princess Aura and complete our family ❤️ @hazelkeech pic.twitter.com/wHxsJuNujY
— Yuvraj Singh (@YUVSTRONG12) August 25, 2023
ನಿದ್ರೆಯಿಲ್ಲದ ರಾತ್ರಿಗಳು ಸಂತೋಷದ ಗಂಟೆಗಳಾಗಿ ಮಾರ್ಪಟ್ಟಿವೆ. ರಾಜಕುಮಾರಿ ಔರಾಗೆ ಸುಸ್ವಾಗತ. ಆಕೆಯ ಆಗಮನದಿಂದ ನಮ್ಮ ಕುಟುಂಬ ಪರಿಪೂರ್ಣವಾಗಿದೆ ಎಂದು ಯುವಿ ಫೋಟೋ ಕ್ಯಾಪ್ಷನ್ ಬರೆದಿದ್ದಾರೆ. ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದ ಹೇಜಲ್: ಇದಕ್ಕೂ ಮುನ್ನ ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಗಂಡು ಮಗುವಿಗೆ ಜನ್ಮ ನೀಡಿದ್ದರು. 2022 ರ ಜನವರಿಯಲ್ಲಿ ಮಗ ಜನಿಸಿದಾಗ ಯುವರಾಜ್ ಸಿಂಗ್ ಮತ್ತು ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಮಗ ಓರಿಯನ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅದರ ಬಗ್ಗೆ ತಿಳಿಸಿದ್ದರು. ಯುವರಾಜ್ ಸಿಂಗ್ 30 ನವೆಂಬರ್ 2016 ರಂದು ಹೇಜಲ್ ಕೀಚ್ ಅವರನ್ನು ವಿವಾಹವಾದರು. ಅವರು ಪಂಜಾಬ್‌ನ ಫತೇಘರ್ ಸಾಹಿಬ್ ಗುರುದ್ವಾರದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹವಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಯುವರಾಜ್ ವಿದಾಯ: ಯುವರಾಜ್ ಸಿಂಗ್ 2000 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2019 ರಲ್ಲಿ ತಮ್ಮ ವೃತ್ತಿ ಜೀವನದ ಆಟಕ್ಕೆ ವಿದಾಯ ಹೇಳಿದ್ದರು. ಅವರು ಭಾರತಕ್ಕಾಗಿ ಸುಮಾರು 398 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 11000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನೂ ಹೊಂದಿದ್ದಾರೆ.
2011ರ ವಿಶ್ವಕಪ್‌ನಲ್ಲಿ ಯುವರಾಜ್ ಮಿಂಚು: 2011ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದರಲ್ಲಿ ಅವರು 300ಕ್ಕೂ ಹೆಚ್ಚು ರನ್ ಗಳಿಸಿದ್ದರು. ಇದಲ್ಲದೇ ಬೌಲಿಂಗ್ನಲ್ಲಿ 15 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಅವರು ಆಲ್‌ರೌಂಡರ್ ಆಗಿ ಪ್ರದರ್ಶನ ನೀಡಿದ್ದರು. ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳೂ ಲಭಿಸಿವೆ.
ಓದಿ: ಮಹಾರಾಜ ಟ್ರೋಫಿ: ಶಿವಮೊಗ್ಗ ಲಯನ್ಸ್ ಮಣಿಸಿದ ಹುಬ್ಬಳ್ಳಿ ಟೈಗರ್ಸ್, 7ನೇ ಗೆಲುವಿನೊಂದಿಗೆ ಸೆಮೀಸ್ಗೆ ಲಗ್ಗೆ