ಕಾನ್ಪುರ (ಉತ್ತರ ಪ್ರದೇಶ): ಟಿ-20 ಈಗ ಕ್ರಿಕೆಟ್ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಮಾದರಿ ಆಗಿದೆ. ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗಾಗಲೇ ವಿಶ್ವದಾದ್ಯಂತ ಮನ್ನಣೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಟಿ20 ಮಾದರಿಯ ಲೀಗ್ ಕ್ರಿಕೆಟ್ ಅನ್ನು ಆಯೋಜಿಸಲು ಮುಂದಾಗಿದೆ. ಈಗಾಗಲೇ ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಟಿ20 ಲೀಗ್ನ್ನು ನಡೆಸುತ್ತಿವೆ. ಆದರೆ, ಈ ವರ್ಷದಿಂದ ಉತ್ತರ ಪ್ರದೇಶ ಟಿ20 ಲೀಗ್ ಆರಂಭವಾಗಲಿದೆ.
-
#UPT20 mein kaunsi team lag rahi hai aapko sabse zyada strong? 🤔
— UP T20 League (@t20uttarpradesh) August 24, 2023 " class="align-text-top noRightClick twitterSection" data="
__________👇#UPCA #AbMachegaBawaal | @ShuklaRajiv pic.twitter.com/ieS7jE6pRS
">#UPT20 mein kaunsi team lag rahi hai aapko sabse zyada strong? 🤔
— UP T20 League (@t20uttarpradesh) August 24, 2023
__________👇#UPCA #AbMachegaBawaal | @ShuklaRajiv pic.twitter.com/ieS7jE6pRS#UPT20 mein kaunsi team lag rahi hai aapko sabse zyada strong? 🤔
— UP T20 League (@t20uttarpradesh) August 24, 2023
__________👇#UPCA #AbMachegaBawaal | @ShuklaRajiv pic.twitter.com/ieS7jE6pRS
ಉತ್ತರ ಪ್ರದೇಶ ರಾಜ್ಯದಲ್ಲಿ ಮೊದಲ ಬಾರಿಗೆ ಐಪಿಎಲ್ ಮಾದರಿಯ ಟಿ20 ಲೀಗ್ ಆಯೋಜನೆ ಗೊಂಡಿದ್ದು, ಇದರ ಉದ್ಘಾಟನಾ ಪಂದ್ಯ ನೋಯ್ಡಾ ಸೂಪರ್ ಕಿಂಗ್ಸ್ ಮತ್ತು ಕಾನ್ಪುರ ಸೂಪರ್ ಸ್ಟಾರ್ಸ್ ನಡುವೆ ನಡೆಯಲಿದೆ. ಆಗಸ್ಟ್ 30 ರಂದು ಈ ಲೀಗ್ಗೆ ಅಧಿಕೃತ ಚಾಲನೆ ಸಿಗಲಿದೆ. ರಾತ್ರಿ 7.30ಕ್ಕೆ ಆರಂಭವಾಗಲಿರುವ ಈ ಪಂದ್ಯಕ್ಕೆ ಯುಪಿ ಕ್ರಿಕೆಟ್ ಸಂಸ್ಥೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ನಟರಾದ ಕಾರ್ತಿಕ್ ಆರ್ಯನ್, ದಿಶಾ ಪಟಾನಿ ಸೇರಿದಂತೆ ಹಲವು ತಾರೆಯರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದಾರೆ.
-
Jiska tha aap sabhi ko intezaar, wo aa gaya hai aapki nazron ke saamne 🤩
— UP T20 League (@t20uttarpradesh) August 24, 2023 " class="align-text-top noRightClick twitterSection" data="
Pesh karte hain #UPT20 ka schedule 📜
📍 Green Park, Kanpur#UPCA #AbMachegaBawaal | @ShuklaRajiv pic.twitter.com/6G9lZTcADk
">Jiska tha aap sabhi ko intezaar, wo aa gaya hai aapki nazron ke saamne 🤩
— UP T20 League (@t20uttarpradesh) August 24, 2023
Pesh karte hain #UPT20 ka schedule 📜
📍 Green Park, Kanpur#UPCA #AbMachegaBawaal | @ShuklaRajiv pic.twitter.com/6G9lZTcADkJiska tha aap sabhi ko intezaar, wo aa gaya hai aapki nazron ke saamne 🤩
— UP T20 League (@t20uttarpradesh) August 24, 2023
Pesh karte hain #UPT20 ka schedule 📜
📍 Green Park, Kanpur#UPCA #AbMachegaBawaal | @ShuklaRajiv pic.twitter.com/6G9lZTcADk
ಕಾನ್ಪುರ ಸೂಪರ್ ಸ್ಟಾರ್ಸ್, ನೋಯ್ಡಾ ಸೂಪರ್ ಕಿಂಗ್ಸ್, ಗೋರಖ್‌ಪುರ ಲಯನ್ಸ್, ಲಕ್ನೋ ಫಾಲ್ಕನ್ಸ್, ಕಾಶಿ ರುದ್ರಾಸ್ ಮತ್ತು ಮೀರತ್ ಮೇವರಿಕ್ಸ್ ತಂಡಗಳ ನಡುವೆ ಲೀಗ್‌ನಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ. ಇಂದು (ಶುಕ್ರವಾರ) ಕಾನ್ಪುರಕ್ಕೆ ತಂಡಗಳು ಅಭ್ಯಾಸಕ್ಕೆ ಆಗಮಿಸಲಿವೆ. ಅನುಭವಿ ಆಟಗಾರರಾದ ಭುವನೇಶ್ವರ್ ಕುಮಾರ್, ರಿಂಕು ಸಿಂಗ್, ನಿತೀಶ್ ರಾಣಾ, ಅಂಕಿತ್ ರಜಪೂತ್ ಈ ಲೀಗ್ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ (UPCA) ಟಿಕೆಟ್ ಶುಲ್ಕ ಮತ್ತು ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮೂಲಗಳು ತಿಳಿಸಿರುವ ಪ್ರಕಾರ ಟಿಕೆಟ್ ದರ 100 ರೂಪಾಯಿ ಇರಲಿದೆ. ಯುಪಿ ಟಿ20 ಲೀಗ್‌ನ ಸೆಮಿಫೈನಲ್ 15 ರಂದು ಮತ್ತು ಫೈನಲ್ ಸೆಪ್ಟೆಂಬರ್ 16 ರಂದು ನಡೆಯಲಿದೆ.
ಐಪಿಎಲ್ ಸ್ಟಾರ್ ಆಟಗಾರರಾದ ರಿಂಕು ಸಿಂಗ್ ಮೀರತ್, ನಿತೀಶ್ ರಾಣಾ ಮತ್ತು ಭುವನೇಶ್ವರ್ ಕುಮಾರ್ ನೋಯ್ಡಾ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶಿವಂ ಮಾವಿ ಕಾಶಿ ರುದ್ರಾಸ್, ಪ್ರಿಯಂ ಗಾರ್ಗ್ ಲಖನೌದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Nitish Rana: ದೆಹಲಿ ತೊರೆದು ಉತ್ತರ ಪ್ರದೇಶ ಸೇರಿದ ನಿತೀಶ್ ರಾಣಾ.. ಇದೇ 30 ರಿಂದ ಯುಪಿಟಿ -20 ಲೀಗ್