ಅಹಮದಾಬಾದ್: ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ತಂಡದ ಒಬ್ಬ ಅತ್ಯುತ್ತಮ ಸ್ವಿಂಗ್ ಬೌಲರ್. ಭಾರತದ ವಿರುದ್ಧ ಮೂರನೇ ಡೇ/ನೈಟ್ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ನಲ್ಲಿ ಉತ್ತಮ ಸ್ವಿಂಗ್ ಮಾಡಬಹುದು ಎಂದು ಇಂಗ್ಲೆಂಡ್ ತಂಡದ ಫಾಸ್ಟ್ ಬೌಲರ್ ಮಾರ್ಕ್ ವುಡ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 24 ರಿಂದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಅಹಿರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು 1-1 ರಿಂದ ಸಮಬಲ ಸಾಧಿಸಿವೆ.
"ಪಿಂಕ್ ಬಾಲ್ ಉತ್ತಮವಾಗಿ ಸ್ವಿಂಗ್ ಆಗುತ್ತದೆ, ಹಾಗಾಗಿ ಇದು ನಮ್ಮ ತಂಡಕ್ಕೆ ವರವಾಗಲಿದೆ. ನಮ್ಮ ತಂಡದಲ್ಲಿ ಇಬ್ಬರು ಉತ್ತಮ ಸ್ವಿಂಗ್ ಬೌಲರ್ಗಳಿದ್ದಾರೆ (ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್) ಇದರಿಂದ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು ಎಂದರು.
" ನಾವು ಬೌಲಿಂಗ್ ಮಾಡಿದಾಗ ಚೆಂಡು ಸ್ವಿಂಗ್ ಆದಂತೆ ಚಲಿಸಿದರೆ, ಅದು ಸ್ವಿಂಗ್ ಬೌಲರ್ಗಳಿಗೆ ಸ್ನೇಹಿಯಾಗಲಿದೆ. ಇದು ಬೌಲರ್ಗಳ ವಿಶ್ವಾಸವನ್ನ ಹೆಚ್ಚಿಸುತ್ತದೆ ಎಂದು ವುಡ್ ಹೇಳಿದರು.
ಜಾನಿ ಬೈರ್ಸ್ಟೋವ್ ಜೊತೆಗೆ, ಮಾರ್ಕ್ ವುಡ್ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ.
ಓದಿ : ಶ್ರೀಲಂಕಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಚಮಿಂದಾ ವಾಸ್
ಎರಡು ಕೋಟಿ ರೂ. ಮೂಲಬೆಲೆಯೊಂದಿದ್ದ ಮಾರ್ಕ್ವುಡ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ವುಡ್ ತಮ್ಮ ಕುಟುಂಬದ ಜೊತೆ ಮನೆಯಲ್ಲಿ ಸಮಯ ಕಳೆಯಲು ಬಯಸಿದ್ದು, ಐಪಿಎಲ್ನಿಂದ ಹೊರಗುಳಿಯಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.
ಈ ಬಾರಿಯ ಹರಾಜು ಪಟ್ಟಿಯಲ್ಲಿ ಗರಿಷ್ಠ ಮೂಲಬೆಲೆ(2 ಕೋಟಿ) ಪಡೆದಿರುವ 8 ಆಟಗಾರರ ಪಟ್ಟಿಯಲ್ಲಿ ವುಡ್ ಕೂಡ ಒಬ್ಬರಾಗಿದ್ದಾರೆ.