ETV Bharat / sports

IND vs ENG 2nd ಟಿ-20 : ಆಂಗ್ಲ ಪಡೆಗೆ ಟಕ್ಕರ್​ ನೀಡುತ್ತಾರಾ ಬ್ಲೂ ಬಾಯ್ಸ್​..! - ಭಾರತ ಇಂಗ್ಲೆಂಡ್​ ಟಿ-20 ಸರಣಿ

ಭಾರತ ಇಂಗ್ಲೆಂಡ್​ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಟೀಮ್​ ಇಂಡಿಯಾ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡಲು ಸಿದ್ಧವಾಗಿದೆ.

IND vs ENG 2nd ಟಿ-20
IND vs ENG 2nd ಟಿ-20
author img

By

Published : Mar 14, 2021, 8:04 AM IST

ಅಹ್ಮದಾಬಾದ್​: ವಿಶ್ವದರ್ಜೆಯ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನು ಹೊಂದಿರುವ ಭಾರತ ತಂಡ ಇಂದು ನಡೆಯುವ ಎರಡನೇ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್​​ನಲ್ಲಿ ಸುಧಾರಿಸಿಕೊಂಡು ಪಂದ್ಯ ಗೆಲ್ಲಲು ಪಣತೊಟ್ಟಿದೆ.

ಮೂರು ತಿಂಗಳ ನಂತರ ವೈಟ್​ಬಾಲ್​ ಕ್ರಿಕೆಟ್​ಗೆ ಮರಳಿದ, ಟಿ-20 ಸ್ಪೆಷಲಿಸ್ಟ್​ ಕೆ.ಎಲ್​. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್​ ಯುಜ್ವೇಂದ್ರ ಚಹಾಲ್​ ಮೊದಲ ಪಂದ್ಯದಲ್ಲಿ ಭಾರಿ ವೈಫಲ್ಯ ಕಂಡಿದ್ದಾರೆ. ರಾಹುಲ್ 1 ರನ್​ಗಳಿಸಿದರೆ, ಹಾರ್ದಿಕ್​ 21 ಎಸೆತಗಳಲ್ಲಿ 19 ರನ್​ಗಳಿಸಿದ್ದರು. ಇನ್ನು ಟಿ-20 ಸ್ಪೆಷಲಿಸ್ಟ್ ಬೌಲರ್​ ಚಹಾಲ್ 4 ಓವರ್​ಗಳಲ್ಲಿ 44 ರನ್​ ನೀಡಿ ಕೇವಲ 1 ವಿಕೆಟ್ ಪಡೆದಿದ್ದಾರೆ.

ಆದರೆ, ಕೇವಲ ಒಂದು ಸೋಲು ಭಾರತ ತಂಡದ ಸಾಮರ್ಥ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ. ಕೊಹ್ಲಿ ಪಡೆಯನ್ನ ಈ ಒಂದು ಸೋಲಿನಿಂದ ಟೀಕಿಸುವುದು ಅಸಾಧ್ಯವಾಗಿದೆ. ಏಕೆಂದರೆ ಈ ರೀತಿಯ ಸೋಲುಗಳ ನಂತರ ತಿರುಗಿಬಿದ್ದು ಸರಣಿ ಗೆದ್ದಿರುವ ಇತಿಹಾಸಗಳಿವೆ.

ಕೊಹ್ಲಿ ಕೂಡ ತಂಡದ 'ಎಕ್ಸ್​ ಫ್ಯಾಕ್ಟರ್​'ಗಳಾದ ರಿಷಭ್ ಪಂತ್​ ಮತ್ತು ಹಾರ್ದಿಕ್ ಪಾಂಡ್ಯರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಪಂತ್​ ಆರ್ಚರ್​ಗೆ ಸಿಡಿಸಿದ ರಿವರ್ಸ್​ ಸ್ವೀಪ್​ ಮತ್ತು ಪಾಂಡ್ಯರ ರಾಂಪ್​ಶಾಟ್​ಗೆ ಸೀಮಿತವಾಗಬಾರದು. ಅವರು ತಂಡಕ್ಕೆ ಇನ್ನೂ ಹೆಚ್ಚಿನ ರನ್ ಗಳಿಸಲು ನೆರವಾಗಬೇಕು. ನಾವು ಅವರಿಂದ ಅದನ್ನು ನಿರೀಕ್ಷಿಸುತ್ತಿದ್ದೇವೆ. ಅದಕ್ಕೆ ಅವರು ಸಮರ್ಥರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನು ರೋಹಿತ್​ ಶರ್ಮಾ ಸತತ 6 ಟೆಸ್ಟ್​ ಪಂದ್ಯಗಳನ್ನಾಡಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ಮೊದಲ ಪಂದ್ಯದಲ್ಲಿ 12 ಎಸೆತಗಳಿಗೆ 4 ರನ್​ಗಳಿಸಿದ ಧವನ್​ ಮೇಲೆ ಇದೀಗ ಹೆಚ್ಚಿನ ಒತ್ತಡ ಇದ್ದು, ಅವರಿಂದ 2ನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಿರೀಕ್ಷಿಸಲಾಗುತ್ತಿದೆ.

ಚಹಾಲ್​ ಸ್ಪಿನ್​ ಸ್ನೇಹಿ ಪಿಚ್​​ನಲ್ಲೇ ವಿಫಲವಾಗಿರುವುದರಿಂದ ಮತ್ತೊಮ್ಮೆ ಅದೇ ವೈಫಲ್ಯ ಮರುಕಳಿಸಿದರೆ, ಸ್ಪಿನ್​ ಬೌಲಿಂಗ್ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ರಾಹುಲ್ ತೆವಾಟಿಯಾಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಓದಿ : ಸಚಿನ್, ಯುವಿ ಅಬ್ಬರ: ದ.ಅಫ್ರಿಕಾ ಲೆಜೆಂಡ್ ವಿರುದ್ಧ ಭಾರತ ಲೆಜೆಂಡ್​ಗೆ 56 ರನ್​ಗಳ ಜಯ

ಇತ್ತ ಇಂಗ್ಲೆಂಡ್ 1-0 ದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಎರಡನೇ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯಲು ಸಜ್ಜಾಗಿದೆ. ಈಗಾಗಲೇ ಟಿ-20 ಶ್ರೇಯಾಂಕದಲ್ಲಿ ನಂಬರ್​ 1 ಸ್ಥಾನದಲ್ಲಿರುವ ಆಂಗ್ಲ ಪಡೆ, ವಿಶ್ವಕಪ್​ ತಯಾರಿಯ ಭಾಗವಾಗಿ ಈ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ತಂಡಗಳು:

ಭಾರತ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೀ), ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ದೀಪಕ್ ಚಹರ್, ರಾಹುಲ್ ತೆವಾಟಿಯಾ, ಇಶಾನ್ ಕಿಶನ್ (ಮೀಸಲು ವಿಕೆಟ್ ಕೀಪರ್).

ಇಂಗ್ಲೆಂಡ್ : ಇಯೊನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್, ಜೇಸನ್ ರಾಯ್, ಲಿಯಾಮ್ ಲಿವಿಂಗ್​ಸ್ಟೋನ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಆದಿಲ್ ರಶೀದ್, ರೀಸ್ ಟಾಪ್ಲೆ, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಸ್ಯಾಮ್ ಕರ್ರನ್, ಟಾಮ್ ಕರ್ರನ್, ಸ್ಯಾಮ್ ಬಿಲ್ಲಿಂಗ್ಸ್, ಜಾನಿ ಬೈರ್‌ಸ್ಟೋವ್, ಜೋಫ್ರಾ ಆರ್ಚರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.