ಸಿಡ್ನಿ (ಆಸ್ಟ್ರೇಲಿಯಾ): ಕ್ರಿಕೆಟ್ನಲ್ಲಿ ಬ್ಯಾಟರ್, ತನ್ನತ್ತ ಬರುವ ಎಸೆತವನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಸಕಾಲಕ್ಕೆ ಬ್ಯಾಟ್ ಬೀಸಬೇಕು. ಇಲ್ಲವಾದಲ್ಲಿ ವಿಕೆಟ್ ಕೈಚೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಬ್ಯಾಟ್ಗೆ ಸರಿಯಾಗಿ ಚೆಂಡು ಕನೆಕ್ಟ್ ಆಗದೇ ಇದ್ದರೂ ಕ್ಯಾಚ್ ಆಗುವ ಸಾಧ್ಯತೆ ಇರುತ್ತದೆ. ಆದರೆ ವುಮೆನ್ಸ್ ಬಿಗ್ ಬ್ಯಾಷ್ ಲೀಗ್‌ನಲ್ಲಿ (ಡಬ್ಲೂಬಿಬಿಎಲ್) ಇಂಗ್ಲೆಂಡ್ನ ಬ್ಯಾಟರ್ ಗ್ರೇಸ್ ಹ್ಯಾರಿಸ್ ಮುರಿದ ಬ್ಯಾಟ್‌ನಲ್ಲಿ ಸಿಕ್ಸ್ ಬಾರಿಸಿದರು.
ಇಲ್ಲಿನ ನಾರ್ತ್ ಸಿಡ್ನಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಡಬ್ಲೂಬಿಬಿಎಲ್ನಲ್ಲಿ ಪರ್ತ್ ಸ್ಕಾರ್ಚರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಿನ ಪಂದ್ಯದಲ್ಲಿ ಈ ವಿದ್ಯಮಾನ ನಡೆಯಿತು. ತಂಡದ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಮುರಿದ ಕ್ರಿಕೆಟ್ ಬ್ಯಾಟ್‌ನಲ್ಲಿ ಸಿಕ್ಸರ್ ದಾಖಲಿಸಿದರು.
-
Grace Harris with the broken bat:
— Mufaddal Vohra (@mufaddal_vohra) October 22, 2023 " class="align-text-top noRightClick twitterSection" data="
I'll still hit it for a six.
- She does exactly that and smashed a six!pic.twitter.com/O4XXla6oad
">Grace Harris with the broken bat:
— Mufaddal Vohra (@mufaddal_vohra) October 22, 2023
I'll still hit it for a six.
- She does exactly that and smashed a six!pic.twitter.com/O4XXla6oadGrace Harris with the broken bat:
— Mufaddal Vohra (@mufaddal_vohra) October 22, 2023
I'll still hit it for a six.
- She does exactly that and smashed a six!pic.twitter.com/O4XXla6oad
ಬ್ಯಾಟ್ ಮುರಿದ ಘಟನೆಗಳು ಕ್ರಿಕೆಟ್ನಲ್ಲಿ ಬಹಳಷ್ಟು ನಡೆದಿವೆ. ಆದರೆ ಬ್ಯಾಟ್ ಮುರಿದಾಗಲೂ ಚೆಂಡು ಸಿಕ್ಸ್ ಗಡಿ ದಾಟಿ ಹೋಗಿರುವುದು ಅಪರೂಪ. ಇಂಥದ್ದೊಂದು ಘಟನೆ ಬ್ರಿಸ್ಬೇನ್ ಹೀಟ್ ತಂಡ 14ನೇ ಓವರ್ನಲ್ಲಿ ಬ್ಯಾಟಿಂಗ್ ಮಾಡುವಾಗ ಸಂಭವಿಸಿದೆ. ಪೈಪಾ ಕ್ಲಿಯರಿ ಅವರ ಎಸೆತಕ್ಕೆ ಗ್ರೇಸ್ ಹ್ಯಾರಿಸ್ ಬಲವಾಗಿ ಹೊಡೆದರು. ಈ ಹೊಡೆತದ ರಭಸಕ್ಕೆ ಬ್ಯಾಟ್ನ ಹಿಡಿಕೆ ಮಾತ್ರ ಕೈಯಲ್ಲುಳಿದರೆ, ಉಳಿದ ಭಾಗ ಅರ್ಧ ಭಾಗ ಪಿಚ್ ದಾಟಿ ಮುಂದಕ್ಕೆ ಬಿದ್ದಿತ್ತು. ಅತ್ತ ಬಾಲ್ ಲಾಗ್ ಆನ್ ಕಡೆ ಬೌಂಡರಿ ಲೈನ್ ದಾಟಿತ್ತು. ಈ ಸಿಕ್ಸ್ಗೆ ಸ್ವತಃ ಗ್ರೇಸ್ ಹ್ಯಾರಿಸ್ ಅಚ್ಚರಿ ವ್ಯಕ್ತಪಡಿಸಿದರು.
14ನೇ ಓವರ್ನಲ್ಲಿ ಈ ಸಿಕ್ಸ್ ಗಳಿಸುವ ಮುನ್ನ ಹ್ಯಾರಿಸ್ ತನ್ನ ಬ್ಯಾಟ್ನಿಂದ ಮುರಿದ ಸದ್ದು ಬಂದಿದೆ ಎಂದು ಜತೆಗಾರ್ತಿ ಬೆಸ್ ಹೀತ್ಗೆ ಹೇಳುತ್ತಾರೆ. ಬೆಸ್ ಹೀತ್ ಹೊಸ ಬ್ಯಾಟ್ ಬೇಕಾ ಎಂದು ಕೇಳಿದಾಗ "ಇಲ್ಲಾ ಇದೇ ಬ್ಯಾಟ್‌ನಲ್ಲಿ ಇನ್ನೊಂದು ಸಿಕ್ಸ್ ಗಳಿಸುತ್ತೇನೆ" ಎಂದು ಹೇಳಿದ್ದಾರೆ. ಈ ಸಂಭಾಷಣೆ ವಿಕೆಟ್‌ನ ಮೈಕ್ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಬಿರುಕು ಬಿಟ್ಟ ಬ್ಯಾಟ್‌ನಲ್ಲಿ ಬಿರುಸಾಗಿ ಹೊಡೆದು ಸಿಕ್ಸ್ ಹ್ಯಾರಿಸ್ ಸಿಕ್ಸ್ ಗಳಿಸಿದರು.
ಗ್ರೇಸ್ ಹ್ಯಾರಿಸ್ ಶತಕದಾಟ: ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು ಶತಕ ದಾಖಲಿಸಿದರು. ಶನಿವಾರ ನಡೆದ ಇನ್ನಿಂಗ್ಸ್ನಲ್ಲಿ ಕೇವಲ 59 ಬಾಲ್ನಲ್ಲಿ 11 ಸಿಕ್ಸ್ ಮತ್ತು 12 ಬೌಂಡರಿಯ ಸಹಾಯದಿಂದ 136 ರನ್ ಕಲೆಹಾಕಿದರು. ಬೃಹತ್ ಇನ್ನಿಂಗ್ಸ್ ನೆರವಿನಿಂದ ತಂಡ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿತು.
ಈ ಮೊತ್ತ ಬೆನ್ನತ್ತಿದ ಪರ್ತ್ ಸ್ಕಾರ್ಚರ್ಸ್ಗೆ ಬ್ರಿಸ್ಬೇನ್ ಹೀಟ್ನ ಕರ್ಟ್ನಿ ಸಿಪ್ಪೆಲ್ ಬೌಲಿಂಗ್ನಲ್ಲಿ ಕಾಡಿದರು. ಸ್ಕಾರ್ಚರ್ಸ್ ನಿಗದಿತ ಓವರ್‌ಗಳ ಅಂತ್ಯಕ್ಕೆ 179 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದ ಬ್ರಿಸ್ಬೇನ್ ಹೀಟ್ ತಂಡ 50 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು.
ಇದನ್ನೂ ಓದಿ: World Cup 2023: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ: ಶಮಿ, ಸೂರ್ಯಕುಮಾರ್ ಕಣಕ್ಕೆ