ETV Bharat / sports

ಧೋನಿ ಗ್ರೇಟೆಸ್ಟ್​ ಫಿನಿಶರ್​ ಆಗಿ ದೀರ್ಘಕಾಲ ನೆನಪಿನಲ್ಲಿ ಉಳಿದುಕೊಳ್ಳಲಿದ್ದಾರೆ : ರಿಕಿ ಪಾಂಟಿಂಗ್ - ಎಂಎಸ್ ಧೋನಿ ಗೇಮ್ ಫಿನಿಶರ್​

ನೋಡಿ, ಅವರು ಪಂದ್ಯವನ್ನು ಮುಗಿಸಿದಾಗ ಮತ್ತು ನಿವೃತ್ತರಾದಾಗ, ಕ್ರಿಕೆಟ್​ ಕಂಡ ಶ್ರೇಷ್ಠ ಫಿನಿಶರ್​ಗಳಲ್ಲಿ ಒಬ್ಬರಾಗಿ ಖಂಡಿತ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಸೀಸ್ ಲೆಜೆಂಡ್​ ಹೇಳಿದ್ದಾರೆ..

Dhoni is one of the great finishers
ಎಂಎಸ್ ಧೋನಿ ರಿಕಿ ಪಾಂಟಿಂಗ್
author img

By

Published : Oct 11, 2021, 10:51 PM IST

ದುಬೈ : ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನ ಅತ್ಯಂತ ಶ್ರೇಷ್ಠ ಫಿನಿಶರ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್​ ರಿಕಿ ಪಾಂಟಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಒತ್ತಡದ ಸಂದರ್ಭದಲ್ಲಿ ಧೋನಿ ಅವರ ತಾಳ್ಮೆಯ ಮನೋಭಾವನೆ ಬೆರಗುಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಧೋನಿ ಕೇವಲ 6 ಎಸೆತಗಳಲ್ಲಿ 18 ರನ್​ ಸಿಡಿಸಿ ಸಿಎಸ್​ಕೆ ತಂಡವನ್ನು 9ನೇ ಬಾರಿಗೆ ಫೈನಲ್​​ ಪ್ರವೇಶಿಸುವಂತೆ ಮಾಡಿದರು. ಕೊನೆಯ ಓವರ್​ನಲ್ಲಿ 5 ಎಸೆತಗಳಲ್ಲಿ ತಂಡಕ್ಕೆ 13 ರನ್​ಗಳ ಅಗತ್ಯವಿತ್ತು. ಆದರೆ, ಧೋನಿ ಸತತ ಮೂರು ಎಸೆತಗಳಲ್ಲಿ 3 ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಅವರು (ಧೋನಿ) ಶ್ರೇಷ್ಠ ಫಿನಿಶರ್​ಗಳಲ್ಲಿ ಅವರು ಒಬ್ಬರಾಗಿದ್ದಾರೆ. ನಾವು ಡಗೌಟ್​ನಲ್ಲಿ ಕುಳಿತು ಜಡೇಜಾ ಮೊದಲು ಬರುತ್ತಾರೆಯೇ, ಧೋನಿ ಮುಂದು ಬರುತ್ತಾರೆಯೇ ಎಂದು ಯೋಚನೆ ಮಾಡುತ್ತಿದ್ದೆವು. ಧೋನಿ ಬಂದ ನಂತರ ಪಂದ್ಯವನ್ನು ತಣ್ಣಗೆ ಮುಗಿಸಬಹುದು ಎಂದು ಆ ಸಂದರ್ಭದಲ್ಲಿ ಹೇಳಿದ್ದೆ ಎಂದು ಪಾಂಟಿಂಗ್​ ಪಂದ್ಯದ ನಂತರ ತಿಳಿಸಿದ್ದಾರೆ.

ನೋಡಿ, ಅವರು ಪಂದ್ಯವನ್ನು ಮುಗಿಸಿದಾಗ ಮತ್ತು ನಿವೃತ್ತರಾದಾಗ, ಕ್ರಿಕೆಟ್​ ಕಂಡ ಶ್ರೇಷ್ಠ ಫಿನಿಶರ್​ಗಳಲ್ಲಿ ಒಬ್ಬರಾಗಿ ಖಂಡಿತ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಸೀಸ್ ಲೆಜೆಂಡ್​ ತಿಳಿಸಿದ್ದಾರೆ.

ಡೆಲ್ಲಿ ಬೌಲರ್​ಗಳು ಧೋನಿ ವಿರುದ್ಧ ಯೋಜನೆಗಳನ್ನು ಕಾರ್ಯಾರೂಪಕ್ಕೆ ತರಲು ವಿಫಲರಾದರು ಎಂದು ಪಾಂಟಿಂಗ್ ಸೋಲಿಗೆ ಕಾರಣ ತಿಳಿಸಿದ್ದಾರೆ."ಬಹುಶಃ ಕೊನೆಯ ಎರಡು ಓವರ್‌ಗಳಲ್ಲಿ ನಾವು ಅವರ (ಧೋನಿ) ವಿರುದ್ಧ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲಿಲ್ಲ. ಒಂದು ವೇಳೆ ನೀವು ಲೈನ್​ ಅಂಡ್ ಲೆಂತ್​ ತಪ್ಪಿಸಿದರೆ, ಧೋನಿ ನಿಮಗೆ ದಂಡ ತೆತ್ತುವಂತೆ ಮಾಡುತ್ತಾರೆ. ನಮ್ಮ ಬೌಲರ್​ಗಳು ಧೋನಿಗೆ ಬೌಲಿಂಗ್ ಮಾಡುವಾಗ ತಪ್ಪಾದ ಪ್ರದೇಶಕ್ಕೆ ಬೌಲಿಂಗ್ ಮಾಡಿದರು ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಪಡಿಕ್ಕಲ್, ಕೊಹ್ಲಿ 400+ ರನ್​, 500ರ ಗಡಿ ದಾಟಿದ ಮ್ಯಾಕ್ಸ್​ವೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.