ಅಹ್ಮದಾಬಾದ್: ಬಲಿಷ್ಠ ಚೆನ್ನೈ ಮತ್ತು ಮುಂಬೈ ತಂಡಗಳಿಗೆ ಸೋಲುಣಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡ ಕೇವಲ ಒಂದು ರನ್ನ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದೆ. ಇದೀಗೆ ಮತ್ತೆ ಕೆಕೆಆರ್ ಮಣಿಸಿ ಮಣಿಸಿ ಪ್ಲೇ ಆಫ್ ಸ್ಪರ್ಧೆಯಲ್ಲಿ ಮುಂಚೂಣಿ ತಂಡವಾಗಿ ಮುನ್ನುಗ್ಗುವ ಆಲೋಚನೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಅಮಿತ್ ಮಿಶ್ರಾ ಬದಲಿಗೆ ಲಲಿತ್ ಯಾದವ್ ಕಣಕ್ಕಿಳಿಯಲಿದ್ದಾರೆ.
-
Match 25. Delhi Capitals win the toss and elect to field https://t.co/GDR4bTRtlQ #DCvKKR #VIVOIPL #IPL2021
— IndianPremierLeague (@IPL) April 29, 2021 " class="align-text-top noRightClick twitterSection" data="
">Match 25. Delhi Capitals win the toss and elect to field https://t.co/GDR4bTRtlQ #DCvKKR #VIVOIPL #IPL2021
— IndianPremierLeague (@IPL) April 29, 2021Match 25. Delhi Capitals win the toss and elect to field https://t.co/GDR4bTRtlQ #DCvKKR #VIVOIPL #IPL2021
— IndianPremierLeague (@IPL) April 29, 2021
ಇತ್ತ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಅದೇ ವಿಶ್ವಾಸದಲ್ಲಿದ್ದು. ಇಂದಿನ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯುತ್ತಿದೆ.
ಮುಖಾಮುಖಿ: ಎರಡು ತಂಡಗಳು ಇಲ್ಲಿಯವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಡೆಲ್ಲಿ 11 ಮತ್ತು ಕೆಕೆಆರ್ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಸುನೀಲ್ ನರೈನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಸ್ಟೀವನ್ ಸ್ಮಿತ್, ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮಿಯರ್, ಆಕ್ಸಾರ್ ಪಟೇಲ್, ಲಲಿತ್ ಯಾದವ್, ಕಗಿಸೊ ರಬಾಡ, ಇಶಾಂತ್ ಶರ್ಮಾ, ಅವೇಶ್ ಖಾನ್