ನವದೆಹಲಿ: ಕರ್ನಾಟಕ ವಿರುದ್ಧದ(Karnataka vs Vidarbha) ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ನ(Syed Mushtaq Ali Trophy)ಸೆಮಿಫೈನಲ್ಸ್ ಪಂದ್ಯದಲ್ಲಿ ವಿದರ್ಭ ತಂಡದ ದರ್ಶನ್ ನಾಲ್ಕಂಡೆ( Darshan Nalkande) ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ದಾಖಲೆಗೆ ಪಾತ್ರರಾದರು. ಭಾರತದ ಪರ ಈ ಸಾಧನೆ ಮಾಡಿದ 2ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ(Arun Jaitley Stadium) ನಡೆದ ಕರ್ನಾಟಕ(Karnataka vs Vidarbha) ವಿರುದ್ಧದ ಸೆಮಿಫೈನಲ್ನಲ್ಲಿ ಕೊನೆಯ ಓವರ್ ಎಸೆದ ನಾಲ್ಕಂಡೆ ಕೇವಲ ಒಂದು ರನ್ ನೀಡಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸತತ 4 ವಿಕೆಟ್ ಪಡೆದ ಭಾರತದ 2ನೇ ಹಾಗೂ ವಿಶ್ವದ 9ನೇ ಬೌಲರ್ ಎನಿಸಿಕೊಂಡರು.
ದರ್ಶನ್ 20ನೇ 2,3,4 ಮತ್ತು 5ನೇ ಎಸೆತದಲ್ಲಿ ಕ್ರಮವಾಗಿ ಅನಿವೃದ್ಧ್ ಜೋಶಿ(1), ಶರತ್ ಬಿ ಆರ್(0), ಜಗದೀರ್ಶ ಸುಚಿತ್(0) ಮತ್ತು ಅಭಿನವ್ ಮನೋಹರ್(27) ವಿಕೆಟ್ ಪಡೆದರು.
2019ರಲ್ಲಿ ಸೈಯದ್ ಮುಷ್ತಾಕ್ ಅಲಿ ಸೆಮಿಫೈನಲ್ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ಹರಿಯಾಣ ವಿರುದ್ಧ ಸತತ 4 ವಿಕೆಟ್ ಮತ್ತು ಅದೇ ಓವರ್ನಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದರು.
ಸತತ 4 ವಿಕೆಟ್ ಪಡೆದ ಬೌಲರ್ಗಳು
- 2008- ಜಿಮ್ ಅಲೆನ್ಬಿ
- 2013- ಆಂಡ್ರೆ ರಸೆಲ್
- 2013 - ಅಲ್-ಅಮಿನ್ ಹೊಸೈನ್
- 2019 - ರಶೀದ್ ಖಾನ್
- 2019- ಲಸಿತ್ ಮಾಲಿಂಗ
- 2019 - ಅಭಿಮನ್ಯು ಮಿಥುನ್
- 2020 - ಶಾಹೀನ್ ಅಫ್ರಿದಿ
- 2021- ಕರ್ಟಿಸ್ ಕ್ಯಾಂಫರ್
- 2021 - ದರ್ಶನ್ ನಾಲ್ಕಂಡೆ