ETV Bharat / sports

ಮತ್ತೆ ಮೈದಾನದಲ್ಲಿ ಘರ್ಜಿಸಲಿದ್ದಾರೆ ಸಿಕ್ಸರ್​ ಕಿಂಗ್​ ಯುವರಾಜ್!.. ಯಾವ ಟೂರ್ನಿ ಗೊತ್ತಾ? - T10 Chairman Shaji Ul Mulk

ಅಬುಧಾಬಿಯಲ್ಲಿ ನಡೆಯಲಿರುವ ಟಿ-10 ಲೀಗ್​ನಲ್ಲಿ ಭಾಗವಹಿಸಲು ಯುವರಾಜ್ ಸಿಂಗ್​ ಜೊತೆ ಮಾತುಕತೆ ನಡೆದಿದ್ದು, ಇನ್ನೊಂದೆರಡು ದಿನಗಳಲ್ಲಿ ಅವರು ಟೂರ್ನಿಯಲ್ಲಿ ಭಾಗವಹಿಸುವುದರ ಬಗ್ಗೆ ನಿರ್ಧಾರ ತಿಳಿಸಲಿದ್ದಾರೆ ಎಂದು ಲೀಗ್​ ಅಧ್ಯಕ್ಷ ಶಾಜಿ ಉಲ್ ಮುಲ್ಕ್​ ತಿಳಿಸಿದ್ದಾರೆ.

Yuvraj Singh
author img

By

Published : Oct 17, 2019, 5:30 PM IST

ಅಬುಧಾಬಿ: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಮತ್ತೊಮ್ಮೆ ಬ್ಯಾಟ್​ ಹಿಡಿದು ಘರ್ಜಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ-20 ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೆ, ಆ ಟೂರ್ನಿಯ ಬಳಿಕ ಯುವರಾಜ್​ ಬ್ಯಾಟ್​ ಹಿಡಿದಿರಲಿಲ್ಲ. ಆದರೆ, ಮುಂದಿನ ತಿಂಗಳಿಂದ ಅಬುಧಾಬಿಯಲ್ಲಿ ನಡೆಯುವ ಟಿ10 ಲೀಗ್​ನಲ್ಲಿ ಆಡಲು ಯುವರಾಜ್​ ಸಿಂಗ್​ಗೆ ಮತ್ತೊಂದು ಆಫರ್​ ಬಂದಿದೆ.

ಅಬುಧಾಬಿಯಲ್ಲಿ ನಡೆಯಲಿರುವ ಟಿ-10 ಲೀಗ್​ನಲ್ಲಿ ಭಾಗವಹಿಸಲು ಯುವರಾಜ್ ಜೊತೆ ಮಾತುಕತೆ ನಡೆದಿದ್ದು, ಇನ್ನೊಂದೆರಡು ದಿನಗಳಲ್ಲಿ ಅವರು ಟೂರ್ನಿಯಲ್ಲಿ ಭಾಗವಹಿಸುವುದರ ಬಗ್ಗೆ ನಿರ್ಧಾರ ತಿಳಿಸಲಿದ್ದಾರೆ ಎಂದು ಲೀಗ್​ ಅಧ್ಯಕ್ಷ ಶಾಜಿ ಉಲ್ ಮುಲ್ಕ್​ ತಿಳಿಸಿದ್ದಾರೆ.

ಈಗಾಗಲೆ ಭಾರತದ ಜಹೀರ್ ಖಾನ್, ಮುನಾಫ್ ಪಟೇಲ್, ಪ್ರವೀಣ್ ಕುಮಾರ್, ಪ್ರವೀಣ್ ತಾಂಬೆ ಸೇರಿ 6-7 ಭಾರತೀಯ ಆಟಗಾರರು ಈಗಾಗಲೇ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ವಿಂಡೀಸ್​ ಆಟಗಾರರು, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಕೆಲವು ಸ್ಟಾರ್​ ಆಟಗಾರರು ಈ ಲೀಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.