ETV Bharat / sports

ಕ್ರಿಕೆಟ್​ ಜೀವನಕ್ಕೆ ಸಿಕ್ಸರ್​ ಕಿಂಗ್​ ವಿದಾಯ... ಭವಿಷ್ಯದ ಪ್ಲಾನ್​ ಬಗ್ಗೆ ಮಾಹಿತಿ ಹರಿಬಿಟ್ಟ ಯುವಿ! - ಮುಂಬೈ

ಟೀಂ ಇಂಡಿಯಾದ ಆಲ್​ರೌಂಡರ್​, ಸಿಕ್ಸರ್​ಗಳ ಸರದಾರ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಣೆ ಮಾಡಿದ್ದು, ಇದರ ಮಧ್ಯೆ ತಮ್ಮ ಭವಿಷ್ಯದ ಪ್ಲಾನ್​ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.

ಯುವರಾಜ್​ ಸಿಂಗ್​
author img

By

Published : Jun 10, 2019, 3:58 PM IST

ಮುಂಬೈ: ಟೀಂ ಇಂಡಿಯಾ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದು, 19 ವರ್ಷಗಳ ಚೆಂಡಿನಾಟಕ್ಕೆ ಇಂದು ತೆರೆ ಗುಡ್​ಬೈ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಕ್ಸರ್​ಗಳ ಸರದಾರ​ ತಮ್ಮ ಭವಿಷ್ಯದ ಪ್ಲಾನ್​ ಬಗ್ಗೆ ಮಾತನಾಡಿದ್ದಾರೆ.

ಜೀವನದ ಹೆಚ್ಚು ಸಮಯವನ್ನ ಕ್ರಿಕೆಟ್​ ಆಡುವುದರಲ್ಲಿ ನಾನು ಕಳೆದಿದ್ದು, ಮುಂದಿನ ದಿನಗಳಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವ ಹಾಗೂ ಜನಸಾಮಾನ್ಯರ ಶ್ರೇಯಸ್ಸಿಗಾಗಿ ಸಮಯ ಮೀಸಲಿಡುವುದಾಗಿ ಹೇಳಿದ್ದಾರೆ. 2011ರ ವಿಶ್ವಕಪ್​​ನಲ್ಲಿ ಮಿಂಚಿ ಭಾರತ ಟ್ರೋಫಿ ಗೆಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿ ತದನಂತರ ಕ್ಯಾನ್ಸರ್​ ಚಿಕಿತ್ಸೆಗೊಳಗಾಗಿ ಅದರ ವಿರುದ್ಧ ಬರೋಬ್ಬರಿ ಎರಡು ವರ್ಷಗಳ ಕಾಲ ಹೋರಾಡಿದ್ದಾರೆ.

ಈಗಾಗಲೇ ಕ್ಯಾನ್ಸರ್​​ನಿಂದ ಬಳಲುತ್ತಿರುವವರಿಗಾಗಿ ’You We Can’ ಎಂಬ ಹೆಸರಿನಲ್ಲಿ ಪೌಂಡೇಶನ್​ ನಡೆಸುತ್ತಿರುವ ಯುವಿ, ಮುಂದಿನ ದಿನಗಳಲ್ಲೂ ಅದನ್ನ ಮುಂದುವರೆಸುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯುವರಾಜ್​ ಸಿಂಗ್​​ ತಂಡದ ಸಹ ಆಟಗಾರರು,ಬಿಸಿಸಿಐ, ಬಾಲ್ಯದ ಕೋಚ್​​ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಯುವಿ, ಸದ್ಯ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದರು. ಆದರೆ, ಅವರಿಗೆ ಆಯ್ಕೆ ಸಮಿತಿ ಮನ್ನಣೆ ನೀಡಿರಲಿಲ್ಲ. ಇದರ ಮಧ್ಯೆ ಕಳೆದ ಕೆಲ ವಾರಗಳ ಹಿಂದೆ ಮುಕ್ತಾಯಗೊಂಡ ಐಪಿಎಲ್​​ನಲ್ಲೂ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದಿದ್ದ ಯುವಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿರಲಿಲ್ಲ.

Intro:Body:

ಕ್ರಿಕೆಟ್​ ಜೀವನಕ್ಕೆ ಸಿಕ್ಸರ್​ ಕಿಂಗ್​ ವಿದಾಯ... ಭವಿಷ್ಯದ ಪ್ಲಾನ್​ ಬಗ್ಗೆ ಮಾಹಿತಿ ಹರಿಬಿಟ್ಟ ಯುವಿ! 

ಮುಂಬೈ: ಟೀಂ ಇಂಡಿಯಾ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದು, 19 ವರ್ಷಗಳ ಚೆಂಡಿನಾಟಕ್ಕೆ ಇಂದು ತೆರೆ ಗುಡ್​ಬೈ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಕ್ಸರ್​ಗಳ ಸರದಾರ​ ತಮ್ಮ ಭವಿಷ್ಯದ ಪ್ಲಾನ್​ ಬಗ್ಗೆ ಮಾತನಾಡಿದ್ದಾರೆ. 

ಜೀವನದ ಹೆಚ್ಚು ಸಮಯವನ್ನ ಕ್ರಿಕೆಟ್​ ಆಡುವುದರಲ್ಲಿ ನಾನು ಕಳೆದಿದ್ದು, ಮುಂದಿನ ದಿನಗಳಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವ ಹಾಗೂ ಜನಸಾಮಾನ್ಯರ ಶ್ರೇಯಸ್ಸಿಗಾಗಿ ಸಮಯ ಮೀಸಲಿಡುವುದಾಗಿ ಹೇಳಿದ್ದಾರೆ. 2011ರ ವಿಶ್ವಕಪ್​​ನಲ್ಲಿ ಮಿಂಚಿ ಭಾರತ ಟ್ರೋಫಿ ಗೆಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿ ತದನಂತರ ಕ್ಯಾನ್ಸರ್​ ಚಿಕಿತ್ಸೆಗೊಳಗಾಗಿ ಅದರ ವಿರುದ್ಧ ಬರೋಬ್ಬರಿ ಎರಡು ವರ್ಷಗಳ ಕಾಲ ಹೋರಾಡಿದ್ದಾರೆ. 

ಈಗಾಗಲೇ ಕ್ಯಾನ್ಸರ್​​ನಿಂದ ಬಳಲುತ್ತಿರುವವರಿಗಾಗಿ You We Can ಎಂಬ ಹೆಸರಿನಲ್ಲಿ ಪೌಂಡೇಶನ್​ ನಡೆಸುತ್ತಿರುವ ಯುವಿ, ಮುಂದಿನ ದಿನಗಳಲ್ಲೂ ಅದನ್ನ ಮುಂದುವರೆಸುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯುವರಾಜ್​ ಸಿಂಗ್​​ ತಂಡದ ಸಹ ಆಟಗಾರರು,ಬಿಸಿಸಿಐ, ಬಾಲ್ಯದ ಕೋಚ್​​ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಯುವಿ, ಸದ್ಯ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಆಯ್ಕೆ ಸಮಿತಿ ಮನ್ನಣೆ ನೀಡಿರಲಿಲ್ಲ. ಇದರ ಮಧ್ಯೆ ಕಳೆದ ಕೆಲ ವಾರಗಳ ಹಿಂದೆ ಮುಕ್ತಾಯಗೊಂಡ ಐಪಿಎಲ್​​ನಲ್ಲೂ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದಿದ್ದ ಯುವಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿರಲಿಲ್ಲ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.