ಮುಂಬೈ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಅಂತಿಮ ಹಣಾಹಣಿ ಲಾರ್ಡ್ಸ್ ಮೈದಾನದ ಬದಲು ಸೌತಾಂಪ್ಟನ್ನ ಏಜಸ್ ಬೌಲ್ನಲ್ಲಿ ಜೂನ್ 18ರಿಂದ 22ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಸೌತಾಂಪ್ಟನ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಹಾಜರಾಗುವುದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಫೈನಲ್ ಪಂದ್ಯವನ್ನು ಸೌತಾಂಪ್ಟನ್ನಲ್ಲಿ ನಡೆಸುವುದು ತುಂಬಾ ದಿನಗಳ ಹಿಂದಿನ ನಿರ್ಧಾರವಾಗಿದೆ. ಕೋವಿಡ್ 19 ಪರಿಸ್ಥಿತಿಯಲ್ಲಿ ಅಲ್ಲಿನ ಹೋಟೆಲ್ಗಳು ಮುಚ್ಚಿದ್ದವು. ಈ ಕಾರಣದಿಂದ ಪಂದ್ಯವನ್ನು ಅಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸೌತಾಂಪ್ಟನ್ನಲ್ಲಿ ಇಂಗ್ಲೆಂಡ್ನ ಹಲವು ದೇಶಿ ಟೂರ್ನಮೆಂಟ್ಗಳನ್ನು ನಡೆಸಲಾಗಿದೆ. ಅಲ್ಲದೇ ಬಯೋಬಬಲ್ ನಿರ್ಮಿಸಲು ಈ ಸ್ಥಳ ತುಂಬಾ ಅನುಕೂಲ ಎಂದು ಗಂಗೂಲಿ ವಿವರಿಸಿದರು.
ಇದನ್ನೂ ಓದಿ: ಎಲ್ಲಾ 3 ಮಾದರಿ ಕ್ರಿಕೆಟ್ ಟೂರ್ನಿಗಳಲ್ಲಿ ಫೈನಲ್ ತಲುಪಿದ ಏಕೈಕ ತಂಡ ಭಾರತ