ETV Bharat / sports

ವಿಂಡೀಸ್​ ವಿರುದ್ಧದ ಟಿ-20 ಸರಣಿಗೆ ಘೋಷಿಸಿದ ಕಿವೀಸ್ ತಂಡದಲ್ಲಿ ವಿಲಿಯಮ್ಸನ್​, ಬೌಲ್ಟ್ ಹೆಸರಿಲ್ಲ! - ವಿಲಿಯಮ್ಸನ್​ಗೆ ವಿಶ್ರಾಂತಿ

ಐಪಿಎಲ್​ನಲ್ಲಿ ಮಿಂಚಿದ ಬೌಲ್ಟ್​ ಮತ್ತು ವಿಲಿಯಮ್ಸನ್​ಗೆ ವಿಶ್ರಾಂತಿ ನೀಡಿದ್ದು, ಅವರು ನವೆಂಬರ್​ 30ರಿಂದ ಆರಂಭವಾಗಲಿರುವ ಟೆಸ್ಟ್​ ಸರಣಿಯಲ್ಲಿ ತಂಡ ಸೇರಿಕೊಳ್ಳಲಿದ್ದಾರೆ.

ವಿಲಿಯಮ್ಸನ್​, ಬೋಲ್ಟ್
ವಿಲಿಯಮ್ಸನ್​, ಬೋಲ್ಟ್
author img

By

Published : Nov 17, 2020, 6:43 PM IST

ಆಕ್ಲೆಂಡ್​: ನ್ಯೂಜಿಲ್ಯಾಂಡ್ ಕ್ರಿಕೆಟ್​ ಬೋರ್ಡ್​ ಸೋಮವಾರ ಮುಂಬರುವ ವಿಂಡೀಸ್ ವಿರುದ್ಧದ ಟಿ-20 ಸರಣಿಗೆ ತಂಡ ಘೋಷಣೆ ಮಾಡಿದ್ದು, ಕೇನ್ ವಿಲಿಯಮ್ಸನ್​ ಮತ್ತು ಟ್ರೆಂಟ್ ಬೌಲ್ಟ್​ಗೆ ವಿಶ್ರಾಂತಿ ನೀಡಿದೆ.

ದಕ್ಷಿಣ ಆಫ್ರಿಕಾದಿಂದ ವಲಸೆ ಬಂದು ಕಿವೀಸ್​ ನೆಲದಲ್ಲಿ ಕಳೆದೆರಡು ವರ್ಷಗಳಿಂದ ಮಿಂಚುತ್ತಿರುವ ಡಿವೋನ್​ ಕಾನ್ವೆ ಜೊತೆಗೆ ಯುವ ಆಲ್​ರೌಂಡರ್ ಜಮೀಸನ್​ ಟಿಮ್ ಸೌಥಿ ನೇತೃತ್ವದ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಐಪಿಎಲ್​ನಲ್ಲಿ ಮಿಂಚಿದ ಬೌಲ್ಟ್​ ಮತ್ತು ವಿಲಿಯಮ್ಸನ್​ಗೆ ವಿಶ್ರಾಂತಿ ನೀಡಿದ್ದು, ಅವರು ನವೆಂಬರ್​ 30ರಿಂದ ಆರಂಭವಾಗಲಿರುವ ಟೆಸ್ಟ್​ ಸರಣಿಯಲ್ಲಿ ತಂಡ ಸೇರಿಕೊಳ್ಳಲಿದ್ದಾರೆ.

ಟಿಮ್ ಸೌಥಿ, ಜಮೀಸನ್ ಮತ್ತು ರಾಸ್​ ಟೇಲರ್​ ಕೇವಲ ಮೊದಲೆರಡು ಟಿ-20 ಪಂದ್ಯಗಳಿಗೆ ಮಾತ್ರ ಲಭ್ಯರಿರುತ್ತಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್​ ಬೋರ್ಡ್​ ಖಚಿತಪಡಿಸಿದೆ. ಈ ಮೂವರ ಬದಲಾಗಿ ಡಾಗ್ ಬ್ರೇಸ್​ವೆಲ್​, ಮಾರ್ಕ್ ಚಾಂಪ್​ಪನ್​ ಮತ್ತು ಸ್ಕಾಟ್​ ಕುಗ್ಗೆಲೀಜ್ನ್​ ಟಿ-20 ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ನ್ಯೂಜಿಲೆಂಡ್ ಟಿ-20 ತಂಡ: ಟಿಮ್ ಸೌಥಿ (ನಾಯಕ), ಹ್ಯಾಮೀಶ್ ಬೆನೆಟ್, ಡೆವೊನ್ ಕಾನ್ವೆ, ಲೂಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೆಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಾಸ್ ಟೇಲರ್, ಡಾಗ್ ಬ್ರೇಸ್​​ವೆಲ್, ಸ್ಕಾಟ್ ಕುಗ್ಗೆಲೀಜ್ನ್

ನ್ಯೂಜಿಲೆಂಡ್ ಟೆಸ್ಟ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೆಮೀಸನ್, ಟಾಮ್ ಲಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವ್ಯಾಟ್ಲಿಂಗ್ (ವಿಕೆಟ್ ಕೀಪರ್), ವಿಲ್ ಯಂಗ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.