ಚೆನ್ನೈ: ಕ್ರಿಕೆಟ್ನಿಂದ ಕೆಲವು ತಿಂಗಳಗಳ ಕಾಲ ದೂರವಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ಗೂ ಮುನ್ನ ನಡೆಯುವ ಸಿಎಸ್ಕೆ ಪೂರ್ವ ಸಿದ್ದತಾ ತರಬೇತಿ ಶಿಬಿರದಲ್ಲಿ ಪಾಲಗೊಳ್ಳಲಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಧೋನಿ ಕೊನೆಯ ಬಾರಿ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಡೆದ ಭಾರತ ತಂಡದ ಯಾವುದೇ ಸರಣಿಯಲ್ಲೂ ಅವರಿಗೆ ಅವಕಾಶ ನೀಡಿಲ್ಲ. 2020ರ ಐಪಿಎಲ್ ಆವೃತ್ತಿಗೆ ಮಾರ್ಚ್ 1 ರಿಂದ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ನಡೆಸಲಿರುವ ಪೂರ್ವ ಸಿದ್ದತಾ ಶಿಬಿರದಲ್ಲಿ ಧೋನಿ ಅಭ್ಯಾಸ ಆರಂಭಿಸಲಿದ್ದಾರೆ.
ಈಗಾಗಲೆ ಭಾರತ ತಂಡದ ಕೋಚ್ ರವಿ ಶಾಸ್ತ್ರಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತ ತಂಡಕ್ಕೆ ಧೋನಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಮರಳಬಹುದು ಎಂದು ಸೂಚನೆ ನೀಡಿದ್ದರು.
ಇದೀಗ ಧೋನಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020 ಟಿ20 ವಿಶ್ವಕಪ್ನಲ್ಲಿ ಆಡಬೇಕಾದರೆ ಈ ಬಾರಿ ಐಪಿಎಲ್ ಪ್ರಮುಖವಾಗಿದೆ. ಧೋನಿ ಕೂಡ ಭಾರತ ತಂಡಕ್ಕೆ ಮರಳುವ ಹಂಬಲದಲ್ಲಿದ್ದು, ಈ ಹಿಂದೆಯೇ ಇನ್ನು ಮೂರು ತಿಂಗಳು ತಮ್ಮನ್ನು ಏನು ಕೇಳಬೇಡಿ ಎಂದಿದ್ದರು. ಇದೀಗ ಅವರ ಸಮಯ ಬಂದಿದ್ದು, ಐಪಿಎಲ್ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದುನೋಡಬೇಕಿದೆ.
ಧೋನಿ ಸಿಎಸ್ಕೆ ತಂಡವನ್ನು 10 ಬಾರಿ ಮುನ್ನಡೆಸಿದ್ದು, 10 ಬಾರಿಯೂ ಕಡಿಮೆ ಎಂದರೆ ಸೆಮಿಫೈನಲ್ ಹಂತಕ್ಕೆ ತೆಗದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಮೂರು ಬಾರಿ ಚಾಂಪಿಯನ್ ಹಾಗೂ 5 ಬಾರಿ ರನ್ನರ್ ಅಪ್ ಆಗಿದೆ.