ಕ್ರೈಸ್ಟ್ಚರ್ಚ್: ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡದಲ್ಲಿ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತ ಆಟಗಾರರ ಸಂಖ್ಯೆ 10ಕ್ಕೇರಿದೆ. ಇನ್ನು ಸರಣಿಗೂ ಮುನ್ನ ಒಂದು ಪರೀಕ್ಷೆ ಮಾತ್ರ ಬಾಕಿ ಉಳಿದಿದ್ದು, ಭಾನುವಾರ ನಡೆಯಲಿದೆ.
ನ್ಯೂಜಿಲ್ಯಾಂಡ್ ಆರೋಗ್ಯ ಸಚಿವಾಲಯ ಕ್ವಾರಂಟೈನ್ನಲ್ಲಿದ್ದ ಆಟಗಾರರಿಗೆ ಹೇಗೆ ಸೋಂಕು ಹರಿಡಿದೆ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಅಷ್ಟರಲ್ಲಾಗಲೇ ಮತ್ತೆ ಮೂವರಿಗೆ ಕೋವಿಡ್ ದೃಢಪಟ್ಟಿರುವುದು ಸರಣಿ ನಡೆಯುವುದರ ಮೇಲೆ ಪರಿಣಾಮ ಬೀರಿದೆ.
-
Staying busy ✌🏼
— Pakistan Cricket (@TheRealPCB) December 1, 2020 " class="align-text-top noRightClick twitterSection" data="
Staying fit 💪
No day off 👊🏼
How our players are spending time during their stay in the isolation facility#HarHaalMainCricket pic.twitter.com/pjkQbrOi6A
">Staying busy ✌🏼
— Pakistan Cricket (@TheRealPCB) December 1, 2020
Staying fit 💪
No day off 👊🏼
How our players are spending time during their stay in the isolation facility#HarHaalMainCricket pic.twitter.com/pjkQbrOi6AStaying busy ✌🏼
— Pakistan Cricket (@TheRealPCB) December 1, 2020
Staying fit 💪
No day off 👊🏼
How our players are spending time during their stay in the isolation facility#HarHaalMainCricket pic.twitter.com/pjkQbrOi6A
ಹೊಸ ಸುತ್ತಿನ ಪರೀಕ್ಷೆಯಲ್ಲಿ 46 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಇದರಲ್ಲಿ 3 ಮೂವರ ಫಲಿತಾಂಶ ಪಾಸಿಟಿವ್ ಬಂದಿದೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗಾಗಲೇ ಕೋವಿಡ್ ಪ್ರೋಟೋಕಾಲ್ಗಳನ್ನು ಬ್ರೇಕ್ ಮಾಡಿರುವುದಕ್ಕಾಗಿ ಫೈನಲ್ ವಾರ್ನಿಂಗ್ ನೀಡಲಾಗಿದೆ. ಜೊತೆಗೆ ಅವರ ಮುಂದಿನ ಸರಣಿ ಸಿದ್ಧತೆಗೂ ತೊಡಕಾಗುತ್ತಿದೆ. ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ನಲ್ಲಿ ಡಿಸೆಂಬರ್ 18ರಿಂದ 3 ಪಂದ್ಯಗಳ ಟಿ-20 ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.