ಸಿಡ್ನಿ: ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ನ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, ಈ ಮೂಲಕ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಕಡಿಮೆ ರನ್ ಗಳಿಸಿ ಸೋಲಿನ ಭೀತಿಗೆ ಸಿಲುಕೊಂಡಿದ್ದ ಟೀಂ ಇಂಡಿಯಾ ಬೌಲಿಂಗ್ನಲ್ಲಿ ಚಮತ್ಕಾರ ಮಾಡಿ ಎದುರಾಳಿ ತಂಡವನ್ನ ಕೇವಲ 115 ರನ್ಗಳಿಗೆ ಕಟ್ಟಿಹಾಕಿತು.
ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಪೂನಮ್ ಯಾದವ್, ಪ್ರಮುಖ ನಾಲ್ಕು ವಿಕೆಟ್ ಪಡೆದುಕೊಂಡು ಎದುರಾಳಿ ತಂಡಕ್ಕೆ ವಿಲನ್ ಆದರು. ಇನ್ನು ಇಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದುಕೊಳ್ಳುವ ಚಾನ್ಸ್ ಮಿಸ್ ಮಾಡಿಕೊಂಡ ಬಗ್ಗೆ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಪೂನಮ್, ನಾನು ಗಾಯಗೊಂಡ ಬಳಿಕ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ. ಮುಂದಿನ ಪಂದ್ಯಗಳಲ್ಲೂ ಈ ಪ್ರದರ್ಶನ ನೀಡಲು ಬಯಸುತ್ತೇನೆ. ಇಲ್ಲಿಯವರೆಗೂ ಮೂರನೇ ಸಲ ನಾನು ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಹ್ಯಾಟ್ರಿಕ್ ವಿಕೆಟ್ ಪಡೆದುಕೊಳ್ಳುವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.