ETV Bharat / sports

ಒಂದೇ ಪ್ರವಾಸದಲ್ಲಿ 3 ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ: ನಟರಾಜನ್ ವಿಶೇಷ ದಾಖಲೆ - ಟಿ ನಟರಾಜನ್ ಪದಾರ್ಪಣೆ

ಟೀಂ ಇಂಡಿಯಾ ಪರ 300ನೇ ಆಟಗಾರನಾಗಿ ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ನಟರಾಜನ್, ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡುವ ಮೂಲಕ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದಿದ್ದಾರೆ.

first Indian bowler to make debut in three formats on the same tour
ನಟರಾಜನ್
author img

By

Published : Jan 15, 2021, 11:39 AM IST

ಬ್ರಿಸ್ಬೇನ್: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದಾಗಿ ಆಸೀಸ್ ವಿರುದ್ಧದ ಪ್ರವಾಸದಲ್ಲಿ ನೆಟ್​ ಬೌಲರ್​ ಆಗಿ ಆಯ್ಕೆಯಾಗಿದ್ದ ನಟರಾಜನ್ ಕಾಂಗರೂಗಳ ವಿರುದ್ಧ ಮೂರೂ ಮಾದರಿಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ದಾರೆ.

ಮನುಕ ಓವಲ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ 2 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದ್ರು.

ನಂತರ ಟಿ-20 ಸರಣಿಯ ಮೂರು ಪಂದ್ಯಗಳಲ್ಲೂ ಯಾರ್ಕರ್ ಮೂಲಕ ಗಮನಸೆಳೆದ ನಟರಾಜನ್ 3 ಪಂದ್ಯಗಳಿಂದ 6 ವಿಕೆಟ್ ಪಡೆದು ಚುಟುಕು ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ರು.

ಟೀಂ ಇಂಡಿಯಾದ ಹಲವು ಆಟಗಾರರು ಗಾಯಗೊಂಡ ಪರಿಣಾಮ ನಟರಾಜನ್ ಅದೃಷ್ಟ ಖುಲಾಯಿಸಿದ್ದು, ರೆಡ್ ಬಾಲ್ ಕ್ರಿಕೆಟ್​ಗೆ 300ನೇ ಆಟಗಾರನಾಗಿ ಚೊಚ್ಚಲ ಪಂದ್ಯವಾಡುತ್ತಿದ್ದು, ಮ್ಯಾಥ್ಯೂ ವೇಡ್ ಮತ್ತು ಮಾರ್ನಸ್ ಲಾಬುಶೇನ್​ ಅವರನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್​​ನಲ್ಲೂ ವಿಕೆಟ್ ಅಭಿಯಾನ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.