ಸೂರತ್: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಹಂತದ ಗ್ರೂಪ್ ಬಿಯ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪಂದ್ಯದಲ್ಲಿ ಕರ್ನಾಟಕ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ತಮಿಳುನಾಡು ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ತ.ನಾಡು ಪರ ನಾಯಕ ದಿನೇಶ್ ಕಾರ್ತಿಕ್(43), ವಾಷಿಂಗ್ಟನ್ ಸುಂದರ್(39) ಹಾಗೂ ಕೊನೆಯಲ್ಲಿ ಮಿಂಚಿದ ವಿಜಯ್ ಶಂಕರ್ 15 ಎಸೆತಕ್ಕೆ 25 ಬಾರಿಸಿ ತಂಡದ ಗೌರವ ಮೊತ್ತಕ್ಕೆ ಕಾರಣರಾದರು. ಕರ್ನಾಟಕ ಪರ ವಿ.ಕೌಶಿಕ್, ರೋನಿತ್ ಮೋರೆ ತಲಾ 2 ವಿಕೆಟ್ ಪಡೆದರು.
-
Karnataka Won by 9 Wicket(s) #KARvTN @paytm #MushtaqAliT20 #SuperLeague Scorecard:https://t.co/1jsAbXSQO7
— BCCI Domestic (@BCCIdomestic) November 21, 2019 " class="align-text-top noRightClick twitterSection" data="
">Karnataka Won by 9 Wicket(s) #KARvTN @paytm #MushtaqAliT20 #SuperLeague Scorecard:https://t.co/1jsAbXSQO7
— BCCI Domestic (@BCCIdomestic) November 21, 2019Karnataka Won by 9 Wicket(s) #KARvTN @paytm #MushtaqAliT20 #SuperLeague Scorecard:https://t.co/1jsAbXSQO7
— BCCI Domestic (@BCCIdomestic) November 21, 2019
159 ರನ್ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಕೊಂಚವೂ ಹಿಡಿತ ತಪ್ಪದೆ ಬ್ಯಾಟ್ ಬೀಸಿತು. ಭರವಸೆಯ ಆರಂಭಿಕರಾದ ದೇವದತ್ ಪಡಿಕ್ಕಲ್ ಹಾಗೂ ಕೆ.ಎಲ್.ರಾಹುಲ್ ಮೊದಲ ವಿಕೆಟ್ಗೆ 70 ರನ್ ಜೊತೆಯಾಟ ನಡೆಸಿ ಗೆಲುವು ಸುಲಭವಾಗಿಸಿದರು.
20 ಎಸೆತದಲ್ಲಿ 36 ರನ್ ಗಳಿಸಿದ್ದಾಗ ಪಡಿಕ್ಕಲ್ ಕ್ಯಾಚಿತ್ತು ನಿರ್ಗಮಿಸಿದರು. ಇನ್ನೊಂದೆಡೆ ಲೀಲಾಜಾಲವಾಗಿ ಬ್ಯಾಟಿಂಗ್ ನಡೆಸಿದ ರಾಹುಲ್ ಆಕರ್ಷಕ ಅರ್ಧಶತಕ ಗಳಿಸಿದರು. ನಾಯಕ ಮನೀಷ್ ಪಾಂಡೆ ಸಹ ಅರ್ಧಶತಕ ಗಡಿ ಮುಟ್ಟಿದರು.
ರಾಹುಲ್ 46 ಎಸೆತದಲ್ಲಿ 69 ಹಾಗೂ ಮನೀಷ್ ಪಾಂಡೆ 33 ಎಸೆತದಲ್ಲಿ 52 ರನ್ ಕಲೆಹಾಕಿ 16.2 ಓವರ್ನಲ್ಲಿ 161 ಗುರಿಮುಟ್ಟಿ ಸಂಭ್ರಮಿಸಿದರು. ಏಕೈಕ ವಿಕೆಟ್ ಮುರುಗನ್ ಅಶ್ವಿನ್ ಪಾಲಾಯಿತು.