ಅಹ್ಮದಾಬಾದ್: ಶುಕ್ರವಾರ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್ ನಡೆಯಲಿದ್ದು, ಬಲಿಷ್ಠ ತಮಿಳುನಾಡು ತಂಡ ಯುವಕರ ತಂಡವಾದ ರಾಜಸ್ಥಾನ್ ಸವಾಲನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಪಂಜಾಬ್ ತಂಡ ಬರೋಡ ವಿರುದ್ಧ ಸೆಣಸಾಡಲಿದೆ.
ಸರ್ದಾರ್ ಪಟೇಲ್ ಮೈದಾನದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ನಡೆಯುವ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ಮತ್ತು ರಾಜಸ್ಥಾನ್ ತಂಡ ಎದುರುಬದುರಾಗಲಿವೆ.
ಲೀಗ್ನಲ್ಲಿ ಅಜೇಯವಾಗಿದ್ದ ಕಾರ್ತಿಕ್ ಪಡೆ ಕ್ವಾರ್ಟರ್ ಫೈನಲ್ನಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಬಾಬಾ ಅಪರಾಜಿತ್ ಸಿಡಿಸಿದ ಅರ್ಧಶತಕದ ನೆರವಿನಿಂದ 5 ವಿಕೆಟ್ಗಳ ರೋಚಕ ಜಯ ಸಾಧಿಸಿ ಸೆಮಿಸ್ಗೆ ಪ್ರವೇಶಿಸಿದರೆ, ರಾಜಸ್ಥಾನ ಬಲಿಷ್ಠವಲ್ಲದ ಬಿಹಾರ್ ಮಣಿಸಿ ಉಪಾಂತ್ಯಕ್ಕೆ ಎಂಟ್ರಿ ಕೊಟ್ಟಿದೆ.
ಸಂಜೆ 6:30ಕ್ಕೆ ನಡೆಯುವ ಮತ್ತೊಂದು ಪಂದ್ಯದಲ್ಲಿ ಬರೋಡ ತಂಡ ಚಾಂಪಿಯನ್ ಕರ್ನಾಟಕಕ್ಕೆ ಸೋಲುಣಿಸಿ ಬಂದಿರುವ ಬಲಿಷ್ಠ ಪಂಜಾಬ್ ತಂಡವನ್ನು ಎದುರಿಸಲಿದೆ.
ಇದನ್ನು ಓದಿ:ಕೊನೆಯ 3 ಎಸೆತದಲ್ಲಿ 15 ರನ್ ಸಿಡಿಸಿದ ಸೋಲಂಕಿ : ಸೆಮಿಫೈನಲ್ ಗ್ರ್ಯಾಂಡ್ ಎಂಟ್ರಿಕೊಟ್ಟ ಬರೋಡ!
ಮುಷ್ತಾಕ್ ಅಲಿ ಟಿ20: ಬಿಹಾರ್ ಮಣಿಸಿದ ರಾಜಸ್ಥಾನ್, ಸೆಮೀಸ್ನಲ್ಲಿ ತಮಿಳುನಾಡು ಎದುರಾಳಿ