ನವದೆಹಲಿ: ಯಾವುದೇ ತಂಡದಲ್ಲಾದರೂ ನಾಯಕನಿಗೆ ಒಬ್ಬ ನೆಚ್ಚಿನ ಆಟಗಾರರಿರುತ್ತಾರೆ. ಹಾಗೆಯೇ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಎಂಎಸ್ ಧೋನಿಗೆ ಸುರೇಶ್ ರೈನಾ ಅಚ್ಚುಮೆಚ್ಚಿನ ಆಟಗಾರನಾಗಿದ್ದರು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಪ್ರತಿಯೊಂದು ತಂಡದಲ್ಲೂ ನಾಯಕನಿಗರ ನೆಚ್ಚಿನ ಆಟಗಾರರು ಇರುತ್ತಾರೆ. ಇದು ತಂಡಗಳಲ್ಲಿ ಸರ್ವ ಸಾಮಾನ್ಯ. ಇದೇ ರೀತಿ, ಮಹೇಂದ್ರ ಸಿಂಗ್ ಧೋನಿ ವಿಚಾರಕ್ಕೆ ಬಂದರೆ ಸುರೇಶ್ ರೈನಾರನ್ನು ಹೆಚ್ಚು ಬೆಂಬಲಿಸುತ್ತಿದ್ದರು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
2011ರ ವಿಶ್ವಕಪ್ ವೇಳೆ ಆಡುವ 11ರ ಬಳಗದಲ್ಲಿ ಯೂಸುಫ್ ಪಠಾಣ್ ಹಾಗೂ ರೈನಾರನ್ನು ನಡುವೆ ತೀವ್ರ ಪೈಪೋಟಿಯಿತ್ತು. ಯುಸೂಫ್ ಪಠಾಣ್ ಅದ್ಭುತ ಫಾರ್ಮ್ನಲ್ಲಿದ್ದರು ಧೋನಿ ಫಾರ್ಮ್ನಲ್ಲಿಲ್ಲದ ಸುರೇಶ್ ರೈನಾರನ್ನು ಆಯ್ಕೆ ಮಾಡಿದ್ದರು ಎಂದು ಯುವಿ ಬಹಿರಂಗಪಡಿಸಿದ್ದಾರೆ.
![ರೈನಾ-ಧೋನಿ](https://etvbharatimages.akamaized.net/etvbharat/prod-images/768-512-3407266-344-3407266-1559045946298_2004newsroom_1587375235_1051.jpg)
ರೈನಾಗೆ ಆಗ ಧೋನಿಯಿಂದ ಭಾರೀ ಬೆಂಬಲವಿತ್ತು. ಪ್ರತಿಯೊಂದು ತಂಡದಲ್ಲೂ ನಾಯಕನ ಬೆಂಬಲ ಪಡೆಯುವ ಆಟಗಾರರಿರುತ್ತಾರೆ. ಅದೇ ರೀತಿ ಧೋನಿ ರೈನಾ ಪಾಲಿನ ಗಾಡ್ಫಾದರ್ ಆಗಿದ್ದರು. ಆದರೆ, ಆ ಸಮಯದಲ್ಲಿ ಪಠಾಣ್ ಚೆನ್ನಾಗಿ ಆಡುತ್ತಿದ್ದರು. ನಾನು ಕೂಡ ಉತ್ತಮವಾಗಿ ಆಡುವ ಜೊತೆಗೆ ವಿಕೆಟ್ ಪಡೆಯುತ್ತಿದ್ದೆ. ಆದರೆ, ರೈನಾ ಹಚ್ಚಿನ ಅವಕಾಶ ಪಡೆಯುತ್ತಿದ್ದರು.
ಭಾರತ ತಂಡದಲ್ಲಿ ಎಡಗೈ ಸ್ಪಿನ್ನರ್ ಇರಲಿಲ್ಲವಾದ್ದರಿಂದ ನನ್ನನ್ನು ಅನಿವಾರ್ಯವಾಗಿ ತಂಡದಲ್ಲಿ ಅವಕಾಶ ಕೊಡಬೇಕಿತ್ತು ಎಂದು ಹೇಳಿರುವ ಯುವಿ ಸೌರವ್ ಗಂಗೂಲಿಯನ್ನು ತನ್ನ ನೆಚ್ಚಿನ ನಾಯಕ ಎಂದು ತಿಳಿಸಿದ್ದಾರೆ.
ದಾದಾ ನನ್ನ ನೆಚ್ಚಿನ ಕ್ಯಾಪ್ಟನ್ ಆಗಿದ್ದರು, ನನಗೆ ಸಾಕಷ್ಟು ಬೆಂಬಲ ತೋರಿದ್ದರು. ಅವರೂ ಪ್ರತಿಭಾವಂತರಿಗೆ ಮಣೆ ಹಾಕುವುದರಲ್ಲಿ ನಿಸ್ಸೀಮರಾಗಿದ್ದರು.