ETV Bharat / sports

ಭಾರತ - ಇಂಗ್ಲೆಂಡ್​ 4ನೇ ಟೆಸ್ಟ್​: ಆಂಗ್ಲರಿಗೆ ನನ್ನ ಬೆಂಬಲ ಎಂದ ಸ್ಟೀವ್​ ಸ್ಮಿತ್​ - ಇಂಗ್ಲೆಂಡ್​ ಸ್ಟೀವ್ ಸ್ಮಿತ್​ ಬೆಂಬಲ

ಸ್ಮಿತ್​ ಈ ರೀತಿ ಹೇಳಲು ಬಲವಾದ ಕಾರಣವಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಲಿದೆ. ಒಂದು ವೇಳೆ ಈ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೂ ಅದಕ್ಕೆ ಏನು ಲಾಭವಾಗುವುದಿಲ್ಲ. ಬದಲಾಗಿ ಆಸ್ಟ್ರೇಲಿಯಾಕ್ಕೆ ಫೈನಲ್​ ಪ್ರವೇಶಿಸುವ ಅವಕಾಶ ಸಿಗಲಿದೆ. ಹಾಗಾಗಿ ಸ್ಮಿತ್ ಈ ರೀತಿ ಹೇಳಿದ್ದಾರೆ.​

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್​
ಸ್ಟೀವ್ ಸ್ಮಿತ್​
author img

By

Published : Mar 3, 2021, 10:38 PM IST

ನವದೆಹಲಿ: ಗುರುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ 4ನೇ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲಿ ಎಂದು ಪ್ರಾರ್ಥಿಸುವುದಾಗಿ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್​ ತಿಳಿಸಿದ್ದಾರೆ.

ಹೌದು, ಸ್ಮಿತ್​ ಈ ರೀತಿ ಹೇಳಲು ಬಲವಾದ ಕಾರಣವಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಲಿದೆ. ಒಂದು ವೇಳೆ ಈ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೂ ಅದಕ್ಕೆ ಏನೂ ಲಾಭವಾಗುವುದಿಲ್ಲ. ಬದಲಾಗಿ ಆಸ್ಟ್ರೇಲಿಯಾಕ್ಕೆ ಫೈನಲ್​ ಪ್ರವೇಶಿಸುವ ಅವಕಾಶ ಸಿಗಲಿದೆ. ಹಾಗಾಗಿ ಸ್ಮಿತ್ ಈ ರೀತಿ ಹೇಳಿದ್ದಾರೆ.​

ಇನ್​ಸ್ಟಾಗ್ರಾಮ್​ ಸಂವಾದದ ವೇಳೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್​ನಲ್ಲಿ ನಿಮ್ಮ ಬೆಂಬಲ ಯಾವ ತಂಡಕ್ಕೆ ಎಂದು ಅಭಿಮಾನಿಯೊಬ್ಬ ಕೇಳಿದ್ದಕ್ಕೆ, ನಾನು ಇಂಗ್ಲೆಂಡ್​ ತಂಡವನ್ನು ಚಿಯರ್ ಮಾಡಲಿದ್ದೇನೆ ಎಂದು ಸ್ಮಿತ್​ ಉತ್ತರಿಸಿದ್ದಾರೆ.

ಆಸ್ಟ್ರೇಲಿಯಾ ಪ್ರಸ್ತುತ 69.2 ಅಂಕ ಹೊಂದಿದೆ. ಭಾರತ ತಂಡದ ಬಳಿ 71 ಅಂಕಗಳಿವೆ. ಭಾರತ ಈ ಪಂದ್ಯವನ್ನು ಸೋತರೆ ಅಂಕದಲ್ಲಿ ಕುಸಿತ ಕಾಣಲಿದ್ದು, ಆಗ ನ್ಯೂಜಿಲ್ಯಾಂಡ್ ಅಗ್ರಸ್ಥಾನಕ್ಕೇರಿದರೆ, ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.