ನವದೆಹಲಿ: ಯುವ ಪ್ರತಿಭೆಗಳು ತಮ್ಮ ಆತ್ಮಸ್ಥೈರ್ಯ ತೋರಿಸಲು ಕನಿಷ್ಠ ಐದು ಪಂದ್ಯಗಳ ಅವಕಾಶಬೇಕು ಎಂಬುದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮತವಾದರೆ, ಇದಕ್ಕೆ ಭಿನ್ನವಾದ ಅಭಿಪ್ರಾಯ ಮಾಜಿ ನಾಯಕ ಸೌರವ್ ಗಂಗೂಲಿ ಅವರದ್ದಾಗಿದೆ.
ಸ್ಥಿರವಾದ ಅವಕಾಶಗಳನ್ನು ನೀಡಿದಾಗ ದೇಶಕ್ಕೆ ಅತ್ಯುತ್ತಮವಾದ ಪ್ರತಿಭೆಗಳನ್ನು ನೀಡಲು ಸಾಧ್ಯವಾಗುತ್ತದೆ. ಸದ್ಯ ನಡೆಯುತ್ತಿರುವ ಟಿ-20 ಪಂದ್ಯಗಳ ಬಗ್ಗೆ ಅಷ್ಟೊಂದು ಹೈಪ್ ಮಾಡುವ ಅಗತ್ಯವಿಲ್ಲ. ಆದರೆ, ಮುಂಬರುವ 2020ರ ಟಿ -20 ವಿಶ್ವಕಪ್ಗೆ ಪೂರ್ವ ತಯಾರಿ ಪಂದ್ಯಗಳಂತೆ ನೋಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಮುಂದುವರಿದು ಮಾತನಾಡಿರುವ ಅವರು ಮುಂಬರುವ ಟಿ-20 ವಿಶ್ವಕಪ್ಗೆ ಮಾತ್ರವೇ ಪ್ರಾಮುಖ್ಯತೆ ನೀಡುವುದು ಬೇಡ. ಕಳೆದ ವಿಶ್ವಕಪ್ಗೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಯಿತು. ಒಮ್ಮೊಮ್ಮೆ ಹೆಚ್ಚೆಚ್ಚು ಶಬ್ಧ ಮಾಡುವುದು ಒಳ್ಳೆಯದಲ್ಲ ಎಂದಿರುವ ಗಂಗೂಲಿ, ಭಾರತ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಸ್ಥಿರ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹಮ್ಮದ್, ದೀಪಕ್ ಚಹರ್, ನವದೀಪ್ ಸೈನಿ ಅತ್ಯುತ್ತಮ ಪ್ರತಿಭೆಗಳಾಗಿದ್ದಾರೆ. ಇವರನ್ನೆಲ್ಲ ಜಸ್ಪ್ರೀತ್ ಬುಮ್ರಾ ಹಾದಿಯಲ್ಲಿ ತಯಾರು ಮಾಡಬೇಕಾಗಿದೆ ಎಂದಿದ್ದಾರೆ.