ETV Bharat / sports

ಮಿಥನ್​ ಸಿಡಿಲಬ್ಬರದ ಆಟ... ಬೆಂಗಳೂರು ವಿರುದ್ಧ ಶಿವಮೊಗ್ಗ ಲಯನ್ಸ್​ 7 ವಿಕೆಟ್​ ಜಯ - KPL 2019

ಶಿವಮೊಗ್ಗ ಲಯನ್ಸ್​ ತಂಡದ ನಾಯಕ ಅಭಿಮನ್ಯು ಮಿಥುನ್​ ಅವರ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ.

Shivamogga
author img

By

Published : Aug 20, 2019, 11:36 PM IST

ಬೆಂಗಳೂರು: ಶಿವಮೊಗ್ಗ ಲಯನ್ಸ್​ ತಂಡದ ನಾಯಕ ಅಭಿಮನ್ಯು ಮಿಥುನ್​ ಅವರ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 9ನೇ ಪಂದ್ಯದಲ್ಲಿ ಅತಿಥೇಯ ಬೆಂಗಳೂರು ಬ್ಲಾಸ್ಟರ್​ 7 ವಿಕೆಟ್​ಗಳಿಂದ ಮುಗ್ಗರಿಸಿದೆ. ಟಾಸ್​ ಸೋತರು ಬ್ಯಾಟಿಂಗ್​ ನಡೆಸಿದ ಬೆಂಗಳೂರು 16 ಓವರ್​ಗಳಲ್ಲಿ 114 ರನ್​ಗಳಿಸಿತು. ಈ ವೇಳೆ ಮಳೆ ಬಿದ್ದಿದ್ದರಿಂದ ಮೊದಲ ಇನ್ನಿಂಗ್ಸ್​ ಸ್ಥಗಿತಗೊಳಿಸಲಾಗಿತ್ತು.

ಬೆಂಗಳೂರು ಪರ ಶರತ್​ ಬಿಆರ್​ 23 ಎಸೆತಗಳಲ್ಲಿ 42, ರೋಹನ್​ ಕಡಮ್​ 25, ನಿಕಿ ಜೋಸ್​ 23, ಕೆಎನ್​ ಭರತ್​ 16 ರನ್​ಗಳಿಸಿದ್ದರು. ಶಿವಮೊಗ್ಗ ಪರ ಪವನ್​ ದೇಶಪಾಂಡೆ 2 ವಿಕೆಟ್​, ಪೃಥ್ವಿರಾಜ್​ ಶೇಕಾವತ್​ ಒಂದು ವಿಕೆಟ್​ ಪಡೆದರು.

ಮಳೆಯ ಕಾರಣ ವಿಜೆಡಿ ಮೆಥಡ್​ ಪ್ರಕಾರ 12 ಓವರ್​ಗಳಲ್ಲಿ 106 ರನ್​ಗಳ ಟಾರ್ಗೆಟ್​ ನೀಡಲಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಅರ್ಜುನ್​ ಹೋಯ್ಸಳ 10 ಬಾಲ್​ಗಳಲ್ಲಿ 16 ರನ್​ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ನಿಹಾಲ್​ ಉಲ್ಲಾಳ್​ 17 ಎಸೆತಗಳಲ್ಲಿ 33 ರನ್​ಗಳಿಸಿದ್ದರು. ಅವರು 3 ಬೌಂಡರಿ 2 ಸಿಕ್ಸರ್​ ಸಿಡಿಸಿದರು. ಆದರೆ ನಾಯಕ ಮಿಥುನ್​ 13 ಎಸೆತಗಳಲ್ಲಿ 4 ಸಿಕ್ಸರ್​, 1 ಬೌಂಡರಿ ಸಿಡಿಸಿ ತಂಡಕ್ಕೆ ಇನ್ನು 11 ಎಸೆತಗಳಿರುವಂತೆ ಸತತ 3ನೇ ಗೆಲುವು ತಂದುಕೊಟ್ಟರು.

ಆನಂದ್​ ದೊಡ್ಡಮನಿ 2 ವಿಕೆಟ್​ ಹಾಗೂ ಭರತ್​ ದೇವರಾಜ್​ 1 ವಿಕೆಟ್​ ಪಡೆದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.