ಆಕ್ಲೆಂಡ್: ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಕಿವೀಸ್ ವಿರುದ್ಧ ಮುಂದಿನ ಸರಣಿಗಳನ್ನು ಗೆದ್ದು ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಟೀಮ್ ಇಂಡಿಯಾ ಚಿಂತಿಸುತ್ತಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ತಂಡ 18 ರನ್ಗಳಿಂದ ನ್ಯೂಜಿಲ್ಯಾಂಡ್ ವಿರುದ್ಧ ಸೋಲುಕಂಡಿತ್ತು. ಇದೀಗ ಭಾರತ ತಂಡ 5 ಪಂದ್ಯಗಳ ಟಿ-20, 3 ಪಂದ್ಯಗಳ ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದೆ.
ಈ ಸರಣಿ ಗೆದ್ದು, ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ" ನಿಜವಾಗಿಯೂ ಇಲ್ಲ. ಒಂದು ವೇಳೆ ನೀವು ಸೇಡು ತೀರಿಸಿಕೊಳ್ಳಲು ಬಯಸಿದರೂ ಸಾಧ್ಯವಾಗುವುದಿಲ್ಲ , ಈ ವ್ಯಕ್ತಿಗಳು ಒಳ್ಳೆಯವರು, ಆದ್ದರಿಂದ ನೀವು ಆ ರೀತಿ ಯೋಚನೆ ಮಾಡಲು ಸಾಧ್ಯವಿಲ್ಲ " ಎಂದು ಕೊಹ್ಲಿ ತಿಳಿಸಿದ್ದಾರೆ.
-
Can't help but Love the Kiwis 🇮🇳🇳🇿 #TeamIndia #NZvIND pic.twitter.com/9Qc3k35v5L
— BCCI (@BCCI) January 23, 2020 " class="align-text-top noRightClick twitterSection" data="
">Can't help but Love the Kiwis 🇮🇳🇳🇿 #TeamIndia #NZvIND pic.twitter.com/9Qc3k35v5L
— BCCI (@BCCI) January 23, 2020Can't help but Love the Kiwis 🇮🇳🇳🇿 #TeamIndia #NZvIND pic.twitter.com/9Qc3k35v5L
— BCCI (@BCCI) January 23, 2020
"ಇವೆಲ್ಲವೂ ಮೈದಾನದಲ್ಲಿ ಸ್ಪರ್ಧಾತ್ಮಕವಾಗಿ ಆಡುವುದಕ್ಕೆ ಸೀಮಿತವಾಗಿರುತ್ತದೆ. ನ್ಯೂಜಿಲ್ಯಾಂಡ್ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡ ಹೇಗಿರಬೇಕು ಎಂಬುದಕ್ಕೆ ಉತ್ತಮ ಉದಾಹರಣೆ. ಅವರು ಪ್ರತಿಯೊಂದು ಎಸೆತದಲ್ಲೂ ಶ್ರೇಷ್ಠ ಪ್ರದರ್ಶನ ತೋರಲು ಬಯಸುತ್ತಾರೆ. ಮೈದಾನದಲ್ಲಿ ಅಸಭ್ಯವಾಗಿ ಎಂದಿಗೂ ವರ್ತಿಸುವುದಿಲ್ಲ. ಇನ್ನು ವಿಶ್ವಕಪ್ನಪ್ನಲ್ಲಿ ಅವರು ಫೈನಲ್ ತಲುಪಿದ್ದಕ್ಕೆ ನಿಜವಾಗಿಯೂ ನಾವು ಸಂತೋಷ ಪಟ್ಟಿದ್ದೇವೆ. ಹಾಗಾಗಿ ಸೇಡು ತೀರಿಸಿಕೊಳ್ಳುವ ಯಾವುದೇ ಭಾವನೆ ನಮ್ಮಲಿಲ್ಲಲ್ಲ ಎಂದು ಕೊಹ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರಣಿ ಗೆಲ್ಲಬೇಕು ಎಂದರೆ ನೀವು ಉತ್ತಮ ಕ್ರಿಕೆಟ್ ಆಡಬೇಕು. ನಾವು ಎದುರಾಳಿ ತಂಡವನ್ನು ಎಂದಿಗೂ ಹಗುರವಾಗಿ ಕಾಣುವುದಿಲ್ಲ. ಪಂದ್ಯ ನಡೆಯುವ ಸ್ಥಳ ಹಾಗೂ ಪಿಚ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ತವರು ತಂಡ ಚೆನ್ನಾಗಿ ತಿಳಿದುಕೊಂಡಿರುತ್ತದೆ. ಹಾಗಾಗಿ ಅವರಿಗೆ ಸ್ವಲ್ಪ ಅನುಕೂಲವಿದೆ. ಆದರೆ, ನಾವು ಕೂಡಾ ಇಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಖಂಡಿತವಾಗಿಯೂ ನಾವು ಕೂಡಾ ನಮ್ಮ ಶ್ರೇಷ್ಠ ಪ್ರದರ್ಶನ ನೀಡಬೇಕಿದೆ. ಏಕೆಂದರೆ ನ್ಯೂಜಿಲ್ಯಾಂಡ್ ತಂಡವನ್ನು ತವರಿನಲ್ಲಿ ಮಣಿಸುವುದು ಸವಾಲಿನ ವಿಷಯ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.