ಮುಂಬೈ: ಧೋನಿಯವರ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಧೋನಿ ಬಗೆಗಿನ ತಮ್ಮ ಅಭಿಮಾನ ಹೇಗಿತ್ತು? ಎಂಬುದನ್ನು ಭಾವಾನಾತ್ಮಕ ಬರಹದ ಮೂಲಕ ಹಂಚಿಕೊಂಡಿದ್ದಾರೆ.
'ಈ ಫೋಟೋ ನನ್ನ ಅಮೂಲ್ಯ ಆಸ್ತಿ. ಇದನ್ನು 2007/08ರಲ್ಲಿ ಕಾರ್ಜತ್ನ ಎನ್ಡಿ ಸ್ಟುಡಿಯೋದಲ್ಲಿ ತೆಗಿಸಲಾಗಿತ್ತು. ನನಗೆ ಆಗ 22 ವರ್ಷ ವಯಸ್ಸು. ಧೋನಿ ಜಾಹೀರಾತು ಶೂಟಿಂಗ್ನಲ್ಲಿ ನಟಿಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಒಪ್ಪಿಕೊಂಡಿದ್ದೆ. ಆ ಸಂದರ್ಭದಲ್ಲಿ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುತ್ತಿದ್ದೆ. ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಧೋನಿ ಸಮ್ಮುಖದಲ್ಲಿರಲು ಬಯಸಿದ್ದೆ ಅಷ್ಟೇ. ಆ ಸಂದರ್ಭದಲ್ಲಿ ನನಗೆ ಗಾಯ ಕೂಡ ಆಗಿತ್ತು. ಆದರೆ ಧೋನಿಯನ್ನು ಬೇಟಿಯಾಗುವ ಹಾಗೂ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ನಾನು ನೋವಿನಲ್ಲೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೆ' ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಧೋನಿ ತುಂಬಾ ವಿನಮ್ರರಾಗಿದ್ದರು. ಅವರಿಗೆ ತುಂಬಾ ತಾಳ್ಮೆಯೂ ಇತ್ತು. ಅವರು ನಿಸ್ಸಂದೇಹವಾಗಿ ಒಬ್ಬ ದಯೆ, ಕರುಣೆಯುಳ್ಳ ವ್ಯಕ್ತಿ ಎಂಬುದು ನನಗೆ ತಿಳಿಯಿತು. ಆ ನಂತರ ಅವರ ಮೇಲಿನ ನನ್ನ ಪ್ರೀತಿ, ಗೌರವ ಮತ್ತಷ್ಟು ಹೆಚ್ಚಾಯಿತು ಎಂದು ರಣವೀರ್ ಸಿಂಗ್ ಹೇಳುತ್ತಾರೆ.
ಧೋನಿ ನನ್ನ ಟೋಪಿ ಮತ್ತು ಜರ್ಸಿಗೆ ಸಹಿ ಮಾಡಿದ್ದರು. ಆ ಸಂದರ್ಭದಲ್ಲಿ ಎಲ್ಲಾ ಅಭಿಮಾನಿಗಳಂತೆ ನಾನು ಆ ದಿನ ಮೋಡಗಳ ಮೇಲೆ ನಡೆಯುತ್ತಿದ್ದೇವೆ ಎಂದು ಅನ್ನಿಸಿತು. ಅಂದಿನಿಂದ ನಾನು ಅವರನ್ನು ಬೇಟಿಯಾಗುವಂತಹ ಪ್ರತಿ ಅವಕಾಶದಲ್ಲೂ ಬಹಳ ಉತ್ಸಾಹಭರಿತನಾಗಿರುತ್ತೇನೆ. ಆತ ನನಗೆ ಸಿಕ್ಕಿರುವ ಹಿರಿಯ ಸಹೋದರ ಇದ್ದಂತೆ ಎಂದಿದ್ದಾರೆ.
- " class="align-text-top noRightClick twitterSection" data="
">
ಧೋನಿ ಅವರನ್ನು ಮತ್ತಷ್ಟು ಹೊಗಳಿರುವ ರಣವೀರ್ ಹೀಗೆ 'ಎಂಎಸ್ಡಿ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು. ನನ್ನ ಜೀವಿತಾವಧಿಯಲ್ಲಿ ಅವರ ಸಂಪೂರ್ಣ ಆಟಕ್ಕೆ ಸಾಕ್ಷಿಯಾಗಿದ್ದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.