ಮುಂಬೈ: 2020ರ ಐಪಿಎಲ್ ಆವೃತ್ತಿಯಲ್ಲಿ ತಮ್ಮ ತಂಡದ ಪರ ಆಡುವಂತೆ ರಾಜಸ್ಥಾನ ರಾಯಲ್ಸ್ ತಂಡ ಇಂಗ್ಲೆಂಡ್ನ ಯುವ ಬೌಲರ್ ಜಾರ್ಜ್ ಗಾರ್ಟನ್ಗೆ ಕರೆ ನೀಡಿದೆ.
ಇಂಗ್ಲೆಂಡ್ ಕೌಂಟಿ ಸಸೆಕ್ಸ್ ತಂಡವನ್ನು ಪ್ರತಿನಿಧಿಸುವ 22 ವರ್ಷದ ಎಡಗೈ ಬೌಲರ್ ಗಾರ್ಟನ್ 11 ಪ್ರಥಮ ದರ್ಜೆ ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದಾರೆ. 24 ಲಿಸ್ಟ್ ಎ ಪಂದ್ಯಗಳಿಂದ 29 ವಿಕೆಟ್ ಪಡೆದಿದ್ದರೆ, ಟಿ-20 ಕ್ರಿಕೆಟ್ನಲ್ಲಿ 11 ವಿಕೆಟ್ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಅಬುಧಾಬಿ ಟಿ-20 ಲೀಗ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೆನ್ನಲ್ಲೇ ರಾಜಸ್ಥಾನ ಫ್ರಾಂಚೈಸಿ ಯುವ ಬೌಲರ್ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದು, ಡಿಸೆಂಬರ್ 3ರಿಂದ ಟ್ರಯಲ್ ನೀಡಲಿದೆ.
ರಾಯಲ್ಸ್ 2020ರ ಆವೃತ್ತಿಗೂ ಮುನ್ನ ಜಯದೇವ್ ಉನ್ನಾಡ್ಕಟ್ ಸಹಿತ 11 ದುಬಾರಿ ಆಟಗಾರರನ್ನು ರಿಲೀಸ್ ಮಾಡಿದೆ. ಹಾಗಾಗಿ ವೇಗಿಗಳ ಕಡೆ ಗಮನ ಹರಿಸುತ್ತಿದೆ. ಇನ್ನು ಗಾರ್ಟನ್ ಕೂಡ ಶ್ರೀಮಂತ ಲೀಗ್ನಲ್ಲಿ ಆಡುವ ಅವಕಾಶ ಒದಗಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.