ನವದೆಹಲಿ: ಭಾರತ ಕ್ರಿಕೆಟ್ ಕಂಡಿರುವ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿರುವ ಎಂ.ಎಸ್.ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಈ ವಿಚಾರ ಅವರ ಕೋಟ್ಯಂತರ ಅಭಿಮಾನಿಗಳಿಗೆ ನಿರಾಶೆ ತಂದಿದ್ದರೂ, ಭಾರವಾದ ಮನಸ್ಸಿನಿಂದಲೇ ಧೋನಿಯ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಧೋನಿ ನಿವೃತ್ತಿಗೆ ಪತ್ನಿ ಸಾಕ್ಷಿ ಕೂಡ ಹೃದಯಸ್ಪರ್ಶಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನಿಮ್ಮ ಸಾಧನೆ ನಮಗೆ ಹೆಮ್ಮೆ ತಂದಿದೆ. ನಿಮ್ಮ ಜೀವನಕ್ಕೆ ಅತ್ಯಂತ ಉತ್ಸಾಹ ತಂದುಕೊಡುತ್ತಿದ್ದ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವಾಗ ನೀವು ಕಣ್ಣೀರಿಟ್ಟಿರುತ್ತೀರಾ' ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
'ನಿಮ್ಮ ಸಾಧನೆಗೆ ನೀವು ಹೆಮ್ಮ ಪಡಬೇಕು. ಕ್ರಿಕೆಟ್ಗೆ ನೀವು ನೀಡಿರುವ ಕೊಡುಗೆಗಳಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ನನಗೆ ಹೆಮ್ಮೆಯಿದೆ. ಭವಿಷ್ಯದ ದಿನಗಳಲ್ಲಿ ನಿಮಗೆ ಉತ್ತಮ ಆರೋಗ್ಯ, ಸಂತೋಷವಿರಲಿ ಎಂದು ನಾನು ಬಯಸುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.
ನೀವು ಹೇಳಿರುವುದನ್ನು ಜನರು ಮರೆಯಬಹುದು, ನೀವು ಮಾಡಿರುವ ಸಾಧನೆಯನ್ನು ಜನರು ಮರೆಯಬಹುದು. ಆದರೆ ನೀವು ಅವರ ಮನಸ್ಸಿನಲ್ಲಿ ಮೂಡಿಸಿರುವ ಭಾವನೆಗಳನ್ನು ಜನರು ಮರೆಯುವುದಿಲ್ಲ ಎಂದು ಅಮೆರಿಕದ ಕವಿಯತ್ರಿ ಮಾಯಾ ಎಂಜೆಲೋ ಅವರ ಹೇಳಿಕೆಯೊಂದನ್ನು ತಮ್ಮ ಪೋಸ್ಟ್ನಲ್ಲಿ ಸಾಕ್ಷಿ ಸೇರಿಸಿದ್ದಾರೆ.