ದುಬೈ: 13ನೇ ಆವೃತ್ತಿಯ ಐಪಿಎಲ್ಗೆ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಸೇರಿದಂತೆ ಎಲ್ಲಾ ಆಟಗಾರರು ಯುಎಇ ತಲುಪಿದ್ದಾರೆ.
ಕೋವಿಡ್ 19 ಭೀತಿಯಿಂದ ನ್ಯೂಜಿಲ್ಯಾಂಡ್ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಅದೆಲ್ಲಾ ಊಹಾಪೋಹ ಎಂಬುದು ಕೊನೆಗೂ ಸಾಬೀತಾಗಿದೆ.
ಕಿವೀಸ್ ನಾಯಕ ವಿಲಿಯಮ್ಸನ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿರುವ ಜಿಮ್ಮಿ ನಿಶಾಮ್ ಜೊತೆ ಯುಎಇಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಆರೆಂಜ್ ಆರ್ಮಿಯನ್ನು ಸೇರಿಕೊಳ್ಳಲು ತಾವೂ ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.
-
Look who's on his way to UAE 😍🧡#OrangeArmy #IPL2020 pic.twitter.com/ULHyOXOLps
— SunRisers Hyderabad (@SunRisers) September 3, 2020 " class="align-text-top noRightClick twitterSection" data="
">Look who's on his way to UAE 😍🧡#OrangeArmy #IPL2020 pic.twitter.com/ULHyOXOLps
— SunRisers Hyderabad (@SunRisers) September 3, 2020Look who's on his way to UAE 😍🧡#OrangeArmy #IPL2020 pic.twitter.com/ULHyOXOLps
— SunRisers Hyderabad (@SunRisers) September 3, 2020
ಯುಎಇಗೂ ಬರುವ ಮುನ್ನ ಮಾತನಾಡಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್ನ 13 ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಆತಂಕಕಾರಿ ವಿಚಾರ. ಅದಕ್ಕಾಗಿಯೇ ತಂಡಗಳನ್ನು ಬೇರೆ ಬೇರೆ ಹೋಟೆಲ್ಗಳಲ್ಲಿ ಇರಿಸಿದ್ದಾರೆ. ಆದರೆ ಮತ್ತೊಂದು ಕ್ವಾರಂಟೈನ್ ಮುಗಿಸಿ ಎಲ್ಲರೂ ನೆಗೆಟಿವ್ ಪಡೆದು ಮರಳಲಿದ್ದಾರೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಎಲ್ಲರೂ ಹೆಚ್ಚು ಜಾಗೃತರಾಗಿರಬೇಕು ಮತ್ತು ಶಿಸ್ತುಬದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೌಲ್ಟ್ ಕೂಡ ಯುಎಇಗೆ ಬಂದಿಳಿದಿದ್ದಾರೆ.
-
The answer to 'Where is Trent Boult?' 😋
— Mumbai Indians (@mipaltan) September 3, 2020 " class="align-text-top noRightClick twitterSection" data="
See you soon in Abu Dhabi, @trent_boult 💙#OneFamily #MumbaiIndians #MI #Dream11IPL pic.twitter.com/2WPkRdB8HC
">The answer to 'Where is Trent Boult?' 😋
— Mumbai Indians (@mipaltan) September 3, 2020
See you soon in Abu Dhabi, @trent_boult 💙#OneFamily #MumbaiIndians #MI #Dream11IPL pic.twitter.com/2WPkRdB8HCThe answer to 'Where is Trent Boult?' 😋
— Mumbai Indians (@mipaltan) September 3, 2020
See you soon in Abu Dhabi, @trent_boult 💙#OneFamily #MumbaiIndians #MI #Dream11IPL pic.twitter.com/2WPkRdB8HC