ETV Bharat / sports

ಕೊನೆಗೂ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್‌: ಏಕದಿನ ಸರಣಿ ಕಳೆದುಕೊಂಡ ಟೀಂ ಇಂಡಿಯಾ

author img

By

Published : Feb 8, 2020, 4:33 PM IST

Updated : Feb 8, 2020, 4:55 PM IST

ಎರಡನೇ ಪಂದ್ಯದಲ್ಲಿ 22 ರನ್​ಗಳ ಗೆಲುವು ಸಾಧಿಸುವ ಮೂಲಕ ನ್ಯೂಜಿಲ್ಯಾಂಡ್​ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಏಕದಿನ ಸರಣಿಯನ್ನು 2-0 ಪಾಯಿಂಟುಗಳ ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ನ್ಯೂಜಿಲ್ಯಾಂಡ್​ ತಂಡಕ್ಕೆ ಏಕದಿನ ಸರಣಿ
ನ್ಯೂಜಿಲ್ಯಾಂಡ್​ ತಂಡಕ್ಕೆ ಏಕದಿನ ಸರಣಿ

ಆಕ್ಲೆಂಡ್​: ನ್ಯೂಜಿಲ್ಯಾಂಡ್​ ವಿರುದ್ಧ ಸರಣಿ ಉಳಿಸಿಕೊಳ್ಳಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಭಾರತ 22 ರನ್​ಗಳ ಸೋಲು ಕಾಣುವ ಮೂಲ ಸರಣಿ ಕಳೆದುಕೊಂಡಿದೆ.

ಆಕ್ಲೆಂಡ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ನ್ಯೂಜಿಲ್ಯಾಂಡ್‌ಗೆ ಬ್ಯಾಟಿಂಗ್​ ಆಹ್ವಾನ ನೀಡಿತು. ತವರಿನ ಲಾಭ ಪಡೆದ ಗಪ್ಟಿಲ್(79)​ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ, ರಾಸ್​ ಟೇಲರ್​ ಔಟಾಗದೇ 73, ಹೆನ್ರಿ ನಿಕೋಲ್ಸ್​ 41 ಹಾಗೂ ಇಂದೇ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕೈಲ್​ ಜಮೀಸನ್​ 25 ರನ್ ​ಗಳಿಸಿದರು. ನಿಗದಿತ 50 ಓವರ್​ಗಳಲ್ಲಿ ಕಿವಿಸ್​ 8 ವಿಕೆಟ್​ ಕಳೆದುಕೊಂಡು 273 ರನ್​ಗಳಿಸಿತು.

ಶಾರ್ದೂಲ್​ ಠಾಕೂರ್​ 60 ರನ್​ ನೀಡಿ 2 ವಿಕೆಟ್​ ಪಡೆದರೆ, ಚಹಾಲ್​ 58 ರನ್​ ನೀಡಿ 3 ವಿಕೆಟ್ ಕಿತ್ತರು. ಜಡೇಜಾ 35 ರನ್​ ನೀಡಿ 1 ವಿಕೆಟ್​ ಸಾಧನೆ ಮಾಡಿದರು.

274 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತೀಯ ತಂಡ ಬ್ಯಾಟ್ಸ್​ಮನ್​ಗಳ ವೈಫಲ್ಯ ಅನುಭವಿಸಿ 251 ರನ್​ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ 22 ರನ್​ಗಳ ಸೋಲು ಅನುಭವಿಸಬೇಕಾಯಿತು. ಶ್ರೇಯಸ್​ ಅಯ್ಯರ್​ 52 (57 ಎಸೆತ), ರವೀಂದ್ರ ಜಡೇಜಾ55 (73), ನವದೀಪ್​ ಸೈನಿ 45 (49) ಠಾಕೂರ್​(18) ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.

ಬ್ಯಾಟ್ಸ್​ಮನ್​ಗಳಾದ ಪೃಥ್ವಿ ಶಾ(24), ಮಯಾಂಕ್ ಅಗರ್​ವಾಲ್​(3), ಕೊಹ್ಲಿ(15), ರಾಹುಲ್​(4), ಕೇದಾರ್​ ಜಾದವ್​(9) ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದು ಕೊಹ್ಲಿ ಟೀಂ ಸೋಲಿಗೆ ಕಾರಣವಾಯಿತು.

ನ್ಯೂಜಿಲ್ಯಾಂಡ್ ಪರ ಹೇಮಿಸ್​ ಬ್ಯಾನೆಟ್​ 2, ಟಿಮ್​ ಸೌಥಿ 2, ಕೈಲ್​ ಜಮೀಸನ್​ 2, ಕಾಲಿನ್ ಗ್ರ್ಯಾಂಡ್​ಹೋಮ್​ 2 ಹಾಗೂ ಜೇಮ್ಸ್​ ನೀಶಾಮ್ ​1 ವಿಕೆಟ್​ ಪಡೆದು ಮಿಂಚಿದರು.

ಮೊದಲ ಪಂದ್ಯದಲ್ಲೇ 25 ರನ್ ಹಾಗೂ 2 ವಿಕೆಟ್​ ಪಡೆದ ಕೈಲ್​ ಜಮೀಸನ್​ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು. ಮೂರನೇ ಹಾಗೂ ಕೊನೆಯ ಔಪಚಾರಿಕ ಪಂದ್ಯ ಮಂಗಳವಾರ ಮಾಂಗುನಾಯ್​ನಲ್ಲಿ ನಡೆಯಲಿದೆ.

Last Updated : Feb 8, 2020, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.