ETV Bharat / sports

ಒಂದೇ ಸರಣಿಯಲ್ಲಿ ಪದಾರ್ಪಣೆ ಮಾಡಲಿದ್ದಾರೆ 6 ದಕ್ಷಿಣ ಆಫ್ರಿಕಾ ಆಟಗಾರರು... ಇದು ಕೋಚ್​ ಬೌಷರ್​ ಸ್ಪೆಷಲ್ - ಒಂದೇ ಸರಣಿಯಲ್ಲಿ 6 ಪದಾರ್ಪಣೆ

ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ  ಇಂಗ್ಲೆಂಡ್​ ವಿರುದ್ಧ ನಡೆಯುವ 4 ಪಂದ್ಯಗಳ ಟೆಸ್ಟ್​ ಸರಣಿಗಾಗಿ 17 ಸದಸ್ಯರ ತಂಡವನ್ನು ಸೋಮವಾರ ಘೋಷಿಸಿದ್ದು ಇದರಲ್ಲಿ 6 ಹೊಸ ಆಟಗಾರರಿದ್ದಾರೆ.

South Africa name six uncapped players
South Africa name six uncapped players
author img

By

Published : Dec 16, 2019, 7:59 PM IST

ಕೇಪ್​ಟೌನ್​: ಇತ್ತೀಚೆಗೆ ನಡೆದ ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗಳಲ್ಲಿ ಮುಖಭಂಗ ಅನುಭವಿಸಿರುವ ದಕ್ಷಿಣ ಆಫ್ರಿಕಾದ ಮುಂದಿನ ಟೆಸ್ಟ್​ ಸರಣಿಗೆ 6 ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಇಂಗ್ಲೆಂಡ್​ ವಿರುದ್ಧ ನಡೆಯುವ 4 ಪಂದ್ಯಗಳ ಟೆಸ್ಟ್​ ಸರಣಿಗಾಗಿ 17 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದ್ದು, ಇದರಲ್ಲಿ 6 ಹೊಸ ಆಟಗಾರರನ್ನು ಆಯ್ಕೆಮಾಡಿದ್ದಾರೆ.

ಇದೇ ವರ್ಷ ದಕ್ಷಿಣ ಆಫ್ರಿಕಾದ ಲೆಜೆಂಡರಿ ಕ್ರಿಕೆಟಿಗರಾದ ಹಾಶಿಮ್​ ಆಮ್ಲಾ, ಡೇಲ್​ ಸ್ಟೈನ್ ಹಾಗೂ ಗಾಯದ ಕಾರಣ ವೇಗಿ ಲುಂಗಿ ಎಂಗಿಡಿ ಹಾಗೂ ವೈನ್​ ಮಲ್ಡರ್​ ತಂಡದಿಂದ ಹೊರಬಿದ್ದಿರುವುದರಿಂದ ಹೊಸದಾಗಿ ನೇಮಕಗೊಂಡಿರುವ ಕೋಚ್​ ಮಾರ್ಕ್​ ಬೌಷರ್​ ಹರಿಣ ಪಡೆಯನ್ನು ಮತ್ತೆ ಪುನರ್​ರಚಿಸಲು 6 ಹೊಸ ಸಾಮರ್ಥ್ಯವುಳ್ಳ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ.

ಬ್ಯಾಟ್ಸ್​ಮನ್​ಗಳಾದ ಪೀಟರ್​ ಮಲಾನ್​, ರಾಸ್ಸಿ ವಾನ್​ ಡರ್​ ಡಾಸ್ಸೆನ್​, ವೇಗದ ಬೌಲರ್​ಗಳಾದ ಡೇನ್​ ಪ್ಯಾಟರ್​ಸನ್​ ಹಾಗೂ ಬಿಯುರಾನ್​ ಹೆಂಡ್ರಿಕ್ಸ್​, ಆಲ್​ರೌಂಡರ್​ಗಳಲ್ಲಿ ಡ್ವೇನ್​ ಪ್ರಿಟೋರಿಯಸ್ ಮತ್ತು ವಿಕೆಟ್​ ಕೀಪರ್​ ​ರುಡಿ ಸೆಕೆಂಡ್​ ಮುಂಬರುವ ಟೆಸ್ಟ್​ ಸರಣಿಯಲ್ಲಿ ಪದಾರ್ಪಣೆ ಮಾಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.