ಚೆನ್ನೈ: ಭಾರತೀಯ ಕ್ರಿಕೆಟ್ ತಂಡ ಶ್ರೇಷ್ಠ ನಾಯಕ ಹಾಗೂ ಹಿರಿಯ ಆಟಗಾರ ಎಂ.ಎಸ್.ಧೋನಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಭಾರಿ ಸುದ್ದಿಯಾಗುತ್ತಿದೆ.
"ವಿವಾಹದ ಬಗ್ಗೆ ಮಾತನಾಡುತ್ತಾ ಧೋನಿ, ನಾನು ಓರ್ವ ಉತ್ತಮ ಗಂಡ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಗಂಡನಾದವನು ಪತ್ನಿ ಎಲ್ಲ ಮಾತಿಗೂ ಸಹಮತ ವ್ಯಕ್ತಪಡಿಸಿದರೆ ಪತ್ನಿ ಅತ್ಯಂತ ಸಂತೋಷದಿಂದ ಇರುತ್ತಾಳೆ. ಪುರುಷರು ಸಿಂಹದ ತರ ಆದರೆ ಮದುವೆಯಾಗುವ ತನಕ ಮಾತ್ರ" ಎಂದು ಹಾಸ್ಯಭರಿತವಾಗಿ ಧೋನಿ ಹೇಳಿದ್ದಾರೆ.
- " class="align-text-top noRightClick twitterSection" data="
">
ಮೈದಾನದ ಒಳಗೆ ಹಾಗೂ ಹೊರಗೆ ಅತ್ಯಂತ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವ ಧೋನಿ ಒಳ್ಳೆಯ ಹಾಸ್ಯಪ್ರಜ್ಞೆ ಹೊಂದಿದ್ದಾರೆ. ಸದ್ಯ ಭಾರತ್ ಮ್ಯಾಟ್ರಿಮೋನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧೋನಿ ಆಡಿದ ಮಾತುಗಳು ಇದಕ್ಕೆ ತಾಜಾ ಉದಾಹರಣೆ.