ETV Bharat / sports

ವಿಭಿನ್ನ ಗೆಟಪ್​ನಲ್ಲಿ ಧೋನಿ: ಅಭಿಮಾನಿಗಳಲ್ಲಿ ಅಚ್ಚರಿ, ಕುತೂಹಲ! - ಹೊಸ ಅವತಾರದಲ್ಲಿ ಕಾಣಿಸಿಕೊಂಡ ಧೋನಿ

ಎಂ.ಎಸ್.ಧೋನಿ ಹಲವು ಬಾರಿ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೊಸ ಹೇರ್‌ಸ್ಟೈಲ್, ಗೆಟಪ್ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಈ ಬಾರಿಯ ಅವತಾರ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಕೆರಳಿಸಿದೆ.

ms dhoni new monk avatar
ವಿಭಿನ್ನ ಗೆಟ್‍ ಅಪ್​ನಲ್ಲಿ ಎಂಎಸ್​ಡಿ
author img

By

Published : Mar 14, 2021, 1:17 PM IST

ನವದೆಹಲಿ: ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನ 14 ನೇ ಸೀಸನ್​ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಧೋನಿ ಹಲವು ಬಾರಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೊಸ ಹೇರ್‌ಸ್ಟೈಲ್, ಗೆಟಪ್ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಆದರೆ ಈ ಬಾರಿ ಶಾಂತಚಿತ್ತವಾಗಿ ಕುಳಿತಿರುವ ಅವರು, ಮಾರ್ಷಲ್ ಆರ್ಟ್ಸ್ ಗುರುಗಳು ಹಾಕಿಕೊಳ್ಳುವ ರೀತಿಯ ಬಟ್ಟೆ ತೊಟ್ಟಿದ್ದಾರೆ.

  • Mantra… avatar… we are as 🤯 as you are right now!

    Give us your best guess as to what this mantra is that he's talking about and keep watching this space for the reveal. 😎 pic.twitter.com/km9AQ93Dek

    — Star Sports (@StarSportsIndia) March 14, 2021 " class="align-text-top noRightClick twitterSection" data=" ">

ಹೊಸ ಜಾಹೀರಾತಿಗಾಗಿ ಧೋನಿ ಈ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ 9 ಸೆಕೆಂಡುಗಳ ಪ್ರೋಮೋ ಹಂಚಿಕೊಂಡಿದೆ. 'ಈ ಅವತಾರದ ಹಿಂದಿನ ಮಂತ್ರ ಏನು, ಶೀಘ್ರದಲ್ಲೇ ತಿಳಿಯುತ್ತದೆ' ಎಂದು ಧೋನಿ ಈ ಪ್ರೋಮೋದಲ್ಲಿ ಹೇಳುತ್ತಾರೆ.

ಐಪಿಎಲ್ ಟೂರ್ನಿಗಾಗಿ ಚೆನ್ನೈನಲ್ಲಿ ಸಿಎಸ್‌ಕೆ ಅಭ್ಯಾಸ ಶಿಬಿರದಲ್ಲಿ ಧೋನಿ ಬ್ಯುಸಿಯಾಗಿದ್ದಾರೆ. ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಆರಂಭಿಸಿರುವ ಅವರು, ದಿಢೀರನೆ ಹೊಸ ಅವತಾರವೆತ್ತಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.