ರಾಜ್ಕೋಟ್: ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನದ ಮೂಲಕ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದ್ದು, ಮೂರನೇ ಪಂದ್ಯದಲ್ಲಿ ಭರ್ಜರಿ ಕದನ ಏರ್ಪಡುವ ಎಲ್ಲ ಲಕ್ಷಣ ಗೋಚರಿಸ್ತಿವೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ 36ರನ್ಗಳ ಗೆಲುವು ಮಾಡಲು ಮೂಲಕ ಟೀಂ ಇಂಡಿಯಾ ಈ ಮೈದಾನದಲ್ಲಿ ಪ್ರಥಮ ಜಯ ಸಾಧಿಸಿರುವ ಸಾಧನೆ ಮಾಡಿದೆ. ಇಲ್ಲಿಯವರೆಗೆ ಟೀಂ ಇಂಡಿಯಾ ಈ ಮೈದಾನದಲ್ಲಿ ಮೂರು ಪಂದ್ಯಗಳನ್ನಾಡಿದ್ದು, ಭಾರತಕ್ಕೆ ಸಿಕ್ಕಿರುವ ಮೊದಲ ಗೆಲುವು ಇದಾಗಿದೆ. ಈ ಹಿಂದೆ 2013ರಲ್ಲಿ ಇಂಗ್ಲೆಂಡ್ ವಿರುದ್ಧ 9ರನ್ ಹಾಗೂ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 18ರನ್ಗಳ ಸೋಲು ಕಂಡಿತು.
ಇದರ ಜತೆಗೆ ರಾಜ್ಕೋಟ್ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಎರಡು ತಂಡದ ಪ್ಲೇಯರ್ಸ್ಗಳಿಂದ ಶತಕವಿಲ್ಲದೇ ಬರೋಬ್ಬರಿ 644ರನ್ ಹರಿದು ಬಂದಿರುವುದು ವಿಶೇಷ. ಟೀಂ ಇಂಡಿಯಾದಿಂದ 340ರನ್ ಹಾಗೂ ಆಸ್ಟ್ರೇಲಿಯಾದಿಂದ 304ರನ್ಗಳಿಕೆ ಯಾಗಿವೆ. ಈ ಹಿಂದೆ ಸಹ ಯಾವುದೇ ಪ್ಲೇಯರ್ಸ್ಗಳಿಂದ ಶತಕವಿಲ್ಲದೇ 2007ರಲ್ಲಿ ಚೆನ್ನೈನಲ್ಲಿ 643ರನ್(ಏಷ್ಯಾ ತಂಡ 337ರನ್, ಆಫ್ರಿಕಾ 306ರನ್), 2013ರಲ್ಲಿ ರಾಜ್ಕೋಟ್ನಲ್ಲಿ (ಇಂಗ್ಲೆಂಡ್ 325ರನ್, ಭಾರತ 316ರನ್) ಹಾಗೂ 2017ರಲ್ಲಿ ಕೋಲ್ಕತ್ತಾದಲ್ಲಿ 637ರನ್(ಇಂಗ್ಲೆಂಡ್ 321ರನ್, ಭಾರತ 316ರನ್)ಗಳಿಕೆ ಮಾಡಿದ್ದವು.
ಇಂದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ 100ವಿಕೆಟ್ ಕಿತ್ತು ಸಂಭ್ರಮಿಸಿದ್ದು, ಕೇವಲ 58ನೇ ಇನ್ನಿಂಗ್ಸ್ನಲ್ಲೇ ಈ ಸಾಧನೆ ಮಾಡಿದ್ದಾರೆ. ಈಗಾಗಲೇ ಆಫ್ಘಾನ್ ತಂಡದ ರಾಶಿದ್ ಖಾನ್ 44ನೇ ಇನ್ನಿಂಗ್ಸ್ನಲ್ಲೇ ಈ ಸಾಧನೆ ಮಾಡಿದ್ದಾರೆ.
ಇದರ ಜತೆಗೆ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಮಿಚಲ್ ಸ್ಟಾರ್ಕ್ ಬರೋಬ್ಬರಿ 78ರನ್ಬಿಟ್ಟುಕೊಡುವ ಮೂಲಕ ದುಬಾರಿ ಬೌಲರ್ ಎಣಿಸಿಕೊಂಡರು. ಜತೆಗೆ ಟೀಂ ಇಂಡಿಯಾ ಪ್ಲೇಯರ್ನಿಂದ ಶತಕವಿಲ್ಲದೇ 4ನೇ ಅತಿ ಹೆಚ್ಚಿನ ಸ್ಕೋರ್ ಇದಾಗಿದ್ದು, ಈ ಹಿಂದೆ ಶ್ರೀಲಂಕಾ ವಿರುದ್ಧ ನಾಗ್ಪುರ್ದಲ್ಲಿ ನಡೆದ ಪಂದ್ಯದಲ್ಲಿ ಭಾರತ ಶತಕವಿಲ್ಲದೇ 350ರನ್ಗಳಿಕೆ ಮಾಡಿತ್ತು.