ETV Bharat / sports

ಪಾಕ್ ಮ್ಯಾನೇಜ್ಮೆಂಟ್​ನಿಂದ 'ಮಾನಸಿಕ ಕಿರುಕುಳ': ಕ್ರಿಕೆಟ್ ತೊರೆಯುತ್ತೇನೆ ಎಂದ ಅಮೀರ್ - ಮೊಹಮ್ಮದ್ ಅಮೀರ್ ಲೇಟೆಸ್ಟ್ ನ್ಯೂಸ್

ನಾನು ಈ ಮ್ಯಾನೇಜ್ಮೆಂಟ್ ಅಡಿ ಕ್ರಿಕೆಟ್ ಆಡಬಹುದು ಎಂದು ಭಾವಿಸುವುದಿಲ್ಲ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಹೇಳಿದ್ದಾರೆ.

Amir quits international cricket
ಮೊಹಮ್ಮದ್ ಅಮೀರ್
author img

By

Published : Dec 17, 2020, 4:09 PM IST

ಕರಾಚಿ (ಪಾಕಿಸ್ತಾನ): ನನಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದಿರುವ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್, ಅಂತಾರಾಷ್ಟ್ರೀಯ ಕ್ರಿಕೆಟ್ ತೊರೆಯುವುದಾಗಿ ಹೇಳಿದ್ದಾರೆ.

ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮ್ಯಾನೇಜ್ಮೆಂಟ್ ಜೊತೆ ಕೆಲಸ ಮಾಡಬಹುದು ಎಂದು ನಾನು ಭಾವಿಸುವುದಿಲ್ಲ. ಆದ್ದರಿಂದ, ಹೊರಹೋಗುವುದು ಉತ್ತಮ ಎಂದು ಅಮೀರ್ ಹೇಳಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

"ನಿಜ ಹೇಳಬೇಕೆಂದರೆ, ನಾನು ಈ ಮ್ಯಾನೇಜ್ಮೆಂಟ್ ಅಡಿ ಕ್ರಿಕೆಟ್ ಆಡಬಹುದೆಂದು ಭಾವಿಸುವುದಿಲ್ಲ. ನಾನು ಕ್ರಿಕೆಟ್ ತೊರೆಯುತ್ತಿದ್ದೇನೆ. ಸದ್ಯಕ್ಕೆ ನಾನು ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದೇನೆ, ಅದನ್ನು ನಿಭಾಯಿಸಲು ಸಾಧ್ಯವಿಲ್ಲ, 2010 ರಿಂದ 2015 ವರೆಗೆ ನಾನು ಸಾಕಷ್ಟು ಸಮಸ್ಯೆ ನೋಡಿದ್ದೇನೆ" ಎಂದಿದ್ದಾರೆ.

"ಪಿಸಿಬಿ ನನ್ನ ಮೇಲೆ ಸಾಕಷ್ಟು ಹೂಡಿಕೆ ಮಾಡಿದೆ ಎಂದು ಪದೇ ಪದೆ ಕೇಳಿದ್ದೇನೆ. ನಿಷೇಧದ ನಂತರ ನಾನು ಹಿಂತಿರುಗಿದಾಗ ಶಾಹಿದ್ ಅಫ್ರಿದಿ ಅವರು ನನಗೆ ಅವಕಾಶಗಳನ್ನು ನೀಡಿದ್ದರಿಂದ ನಾನು ಅವರಿಗೆ ಕೃತಜ್ಞನಾಗಿದ್ದೇನೆ" ಎಂದು ಅಮೀರ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

"ಪ್ರತಿಯೊಬ್ಬರೂ ತಮ್ಮ ದೇಶಕ್ಕಾಗಿ ಆಡಲು ಬಯಸುತ್ತಾರೆ. ನಾನು ಇತರ ದೇಶಗಳ ಲೀಗ್​ನಲ್ಲಿ ಆಡಲು ಟೆಸ್ಟ್ ಕ್ರಿಕೆಟ್ ತೊರೆದಿದ್ದೇನೆ ಎಂದು ಹೇಳುತ್ತಲೇ ಇರುತ್ತಾರೆ. ನಾನು ಬಿಪಿಎಲ್ ಮೂಲಕ ಕಂಬ್ಯಾಕ್ ಮಾಡಿದ್ದೇನೆ. ನಾನು ಇತರ ಲೀಗ್‌ಗಳಿಗಾಗಿ ಸಾಯುತ್ತಿದ್ದರೆ, ಪಾಕಿಸ್ತಾನ ಪರ ಆಡಲ್ಲ ಎಂದು ಹೇಳಬಹುದಿತ್ತು. ಎರಡು ದಿನಗಳಲ್ಲಿ ನಾನು ಪಾಕಿಸ್ತಾನ ತಲುಪುತ್ತೇನೆ, ನಂತರ ಹೇಳಿಕೆಯನ್ನು ಬಿಡುಗಡೆ ಮಾಡುತ್ತೇನೆ "ಎಂದು ಅಮೀರ್ ವಿಡಿಯೋದಲ್ಲಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.