ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಇದೀಗ ಹೊಸ ಬ್ಯಾಟಿಂಗ್ ಕೋಚ್ ಆಯ್ಕೆಯಾಗಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಇವರ ಕಾರ್ಯ ಆರಂಭಗೊಳ್ಳಲಿದೆ.
ನ್ಯೂಜಿಲ್ಯಾಂಡ್ನಲ್ಲಿ ಹುಟ್ಟಿದ್ದ ಲ್ಯೂಜ್ ರೊಂಚಿ ಆರಂಭದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದ್ದು, 2008ರಲ್ಲಿ ನಾಲ್ಕು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಿದ್ದಾರೆ. ತದ ನಂತರ 2013 ಹಾಗೂ 2017ರ ನಡುವೆ ನಾಲ್ಕು ಟೆಸ್ಟ್ ಪಂದ್ಯ, 81 ಏಕದಿನ ಹಾಗೂ 30 ಟಿ-20 ಪಂದ್ಯಗಳನ್ನಾಡಿದ್ದು, ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದರು.
-
Former BLACKCAP and @cricketwgtninc Firebird @ronchi04 has been appointed BLACKCAPS batting coach for the coming summer https://t.co/aBdtLSnrb3 #CricketNation
— BLACKCAPS (@BLACKCAPS) November 3, 2020 " class="align-text-top noRightClick twitterSection" data="
">Former BLACKCAP and @cricketwgtninc Firebird @ronchi04 has been appointed BLACKCAPS batting coach for the coming summer https://t.co/aBdtLSnrb3 #CricketNation
— BLACKCAPS (@BLACKCAPS) November 3, 2020Former BLACKCAP and @cricketwgtninc Firebird @ronchi04 has been appointed BLACKCAPS batting coach for the coming summer https://t.co/aBdtLSnrb3 #CricketNation
— BLACKCAPS (@BLACKCAPS) November 3, 2020
ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ವಿಶ್ವಕಪ್ನಲ್ಲಿ ರೊಂಚಿ ನ್ಯೂಜಿಲ್ಯಾಂಡ್ ತಂಡದ ಕೋಚಿಂಗ್ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. ಇದೀಗ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ಈ ನಿರ್ಧಾರದಿಂದ ತಾವು ತುಂಬಾ ಸಂತೋಷಗೊಂಡಿದ್ದೇನೆ. ತಂಡ ಮತ್ತಷ್ಟು ಬಲಿಷ್ಠವಾಗಲು ತಾವು ಶ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.