ಕ್ರಿಕೆಟ್ ದೇವರು, ಕ್ರಿಕೆಟ್ ದಂತಕಥೆ ಅಂತೆಲ್ಲ ಕರೆಸಿಕೊಳ್ಳುವ ಮಾಸ್ಟರ್, ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿ ಬರೋಬ್ಬರಿ ಆರು ವರ್ಷಗಳೇ ಕಳೆದು ಹೋಗಿದೆ. ಆದ್ರೆ ಇವರ ಅಭಿಮಾನಿಗಳ ಅಭಿಮಾನ ಮಾತ್ರ ಇಂದಿಗೂ ಕೂಡ ಹಾಗೆಯೇ ಇದೆ. ಇದಕ್ಕೆ ಸಾಕ್ಷಿಯಾಗಿದೆ ಅಭಿಮಾನಿಯೊಬ್ಬ ಶೇರ್ ಮಾಡಿರುವ ಆ ಪೋಸ್ಟ್.
ಆನಂದ್ ಮೆಹ್ತಾ ಎಂಬುವವರು ತಮ್ಮ ಮಗನಿಗೆ ಟೀಂ ಇಂಡಿಯಾದ ಜೆರ್ಸಿ ತೊಡಿಸಿ, ಕೈಗೆ ಬ್ಯಾಟ್ ಕೊಟ್ಟು ಹೈದರಾಬಾದ್ನ ಎಲ್ ಬಿ ಸ್ಟೇಡಿಯಂನಲ್ಲಿ ಫೋಟೋ ತೆಗೆದಿದ್ದಾರೆ. ಅಲ್ಲದೇ ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಹಾಕಿ ಸಚಿನ್ಗೆ ಟ್ಯಾಗ್ ಮಾಡಿದ್ದಾರೆ.
-
Never too young for 🏏😀!!
— Sachin Tendulkar (@sachin_rt) February 28, 2020 " class="align-text-top noRightClick twitterSection" data="
Thank you for sharing such beautiful pictures.
I wish all the very best to 10-month old Shresth and his family. https://t.co/tKWfCw1C95
">Never too young for 🏏😀!!
— Sachin Tendulkar (@sachin_rt) February 28, 2020
Thank you for sharing such beautiful pictures.
I wish all the very best to 10-month old Shresth and his family. https://t.co/tKWfCw1C95Never too young for 🏏😀!!
— Sachin Tendulkar (@sachin_rt) February 28, 2020
Thank you for sharing such beautiful pictures.
I wish all the very best to 10-month old Shresth and his family. https://t.co/tKWfCw1C95
ಆನಂದ್ ಮೆಹ್ತಾ ತಮ್ಮ ಮಗ ಶೇಷ್ಠ ಮೆಹ್ತಾ ಫೋಟೋ ಹಾಕಿ, ನೀವು ಕ್ರಿಕೆಟ್ ಬದುಕಿಗೆ ನಿವೃತ್ತಿ ಪಡೆದಿರಬಹುದು ಆದ್ರೆ ನಮ್ಮ ಮನಸ್ಸಿಂದ ಅಲ್ಲ. ನಮ್ಮ ಲಿಟ್ಟಲ್ ಮಾಸ್ಟರ್ ಶ್ರೇಷ್ಠ ಮೆಹ್ತಾನಿಂದ ನಿಮಗೆ ಗೌರವ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸಚಿನ್, ಫೋಟೋ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಶ್ರೇಷ್ಠ ಮೆಹ್ತಾ ಮತ್ತು ಕುಟುಂಬಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.