ಪುಣೆ: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಪುಣೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಂಗ್ಲರ ಪಡೆ 6 ವಿಕೆಟ್ಗಳ ಜಯ ಸಾಧಿಸಿದ್ದು, ಸರಣಿಯಲ್ಲಿ 1-1 ಅಂತರದ ಸಲಬಲ ಸಾಧಿಸಿದೆ. ಹೀಗಾಗಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ಮತ್ತಷ್ಟು ರೋಚಕತೆ ಮೂಡಿಸಿದೆ.
ಟೀಂ ಇಂಡಿಯಾ ನೀಡಿದ್ದ 337ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ 43.3 ಓವರ್ಗಳಲ್ಲಿ ಕೇವಲ 4ವಿಕೆಟ್ ಕಳೆದುಕೊಂಡು ಗುರಿ ಮಟ್ಟಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕೆಲ ಬೌಲರ್ಸ್ ಅತಿ ಹೆಚ್ಚು ರನ್ ನೀಡಿ ದುಬಾರಿಯಾದ್ರು. ವಿಶೇಷವೆಂದರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದರೂ ಅವರಿಗೆ ಕೊಹ್ಲಿ ಬೌಲಿಂಗ್ ನೀಡಲಿಲ್ಲ.
ಇದನ್ನೂ ಓದಿ: "Our King Is Back"... ಸಿಎಸ್ಕೆ ಜರ್ಸಿಯಲ್ಲಿ ಕಂಡ ರೈನಾ ಬಗ್ಗೆ ಬ್ರಾವೋ ಟ್ವೀಟ್!
ಕಾರಣ ನೀಡಿದ ಕೊಹ್ಲಿ: ತಂಡದಲ್ಲಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಬೌಲಿಂಗ್ ನೀಡದಿರಲು ಕಾರಣ ಏನು ಎಂಬುದರ ಬಗ್ಗೆ ಕೊಹ್ಲಿ ಮಾತನಾಡಿದ್ದು, ಆಡಳಿತ ಮಂಡಳಿ ಅವರ ಕೆಲಸದ ಮೇಲೆ ನಿಗಾ ಇಟ್ಟಿದ್ದು, ಯಾವುದೇ ರೀತಿಯ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಬೇಕಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ದೊಡ್ಡ ಟೂರ್ನಿಗಳಿರುವ ಕಾರಣ ಬೌಲಿಂಗ್ ಮಾಡಲು ಬಳಕೆ ಮಾಡಿಕೊಳ್ಳಲಿಲ್ಲ ಎಂದಿದ್ದಾರೆ.
ಪ್ರಮುಖವಾಗಿ ಭಾರತ ಇಂಗ್ಲೆಂಡ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ನಂತಹ ಟೂರ್ನಿಗಳಲ್ಲಿ ಭಾಗಿಯಾಗಲಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ. ಈಗಾಗಲೇ ಐದು ಟಿ-20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಬಳಕೆ ಮಾಡಿಕೊಂಡಿದ್ದು, ಇದರಿಂದ ಅವರಿಗೆ ಸ್ವಲ್ಪ ಕೆಲಸದ ಹೊರೆಯಾಗಿದೆ ಎಂದರು.
ಫಲಿತಾಂಶ ಭಾರತದ ಪರ ಬರದಿದ್ದರೂ, ಇಂದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಫಾರ್ಮ್ಗೆ ಮರಳಿರುವುದು ಸಂತೋಷ ಮೂಡಿಸಿದೆ ಎಂದು ವಿರಾಟ್ ಕೊಹ್ಲಿ ಹೇಳಿದರು.