ETV Bharat / sports

ಸೆಕ್ಯುರಿಟಿ ಗಾರ್ಡ್​ ಜತೆ ಬಾಲಿವುಡ್​ ಸಾಂಗ್​ಗೆ ಜೆಮೈಮಾ ಸಖತ್​ ಸ್ಟೆಪ್- ವಿಡಿಯೋ

author img

By

Published : Feb 27, 2020, 4:43 PM IST

ಟೀಂ ಇಂಡಿಯಾ ಮಹಿಳಾ ತಂಡದ ಸ್ಫೋಟಕ ಆಟಗಾರ್ತಿ ಜೆಮೈಮಾ ರಾಡ್ರಿಗಸ್ ಸೆಕ್ಯುರಿಟಿ ಗಾರ್ಡ್​ ಜತೆ ಸಖತ್​ ಆಗಿ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ.

Jemimah Rodrigues dance
ಜೆಮೈಮಾ ರಾಡ್ರಿಗಸ್ ಸಖತ್​ ಸ್ಟೇಪ್

ಮೆಲ್ಬೋರ್ನ್(ಆಸ್ಟ್ರೇಲಿಯಾ)​​: ಐಸಿಸಿ ಮಹಿಳಾ ಟಿ-20 ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಮಹಿಳಾ ಪಡೆ ಮೊದಲ ತಂಡವಾಗಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ 4ರನ್​ಗಳ ರೋಚಕ ಗೆಲುವು ದಾಖಲಿಸಿರುವ ಇಂಡಿಯಾ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ. ಈ ಮಧ್ಯೆ ತಂಡದ ಸ್ಫೋಟಕ ಆಟಗಾರ್ತಿ ಜೆಮೈಮಾ ರಾಡ್ರಿಗಸ್​ ಸಖತ್​​ ಹೆಜ್ಜೆ​ ಹಾಕಿದ್ದಾರೆ.

ತಾವು ಉಳಿದುಕೊಂಡಿರುವ ಹೊಟೇಲ್​ನ ಮಹಿಳಾ ಸೆಕ್ಯುರಿಟಿ ಗಾರ್ಡ್​ ಜತೆ ಜೆಮೈಮಾ ರಾಡ್ರಿಗಸ್ ಬಾಲಿವುಡ್​ ಸಾಂಗ್​ವೊಂದಕ್ಕೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಈ ವಿಡಿಯೋ ತುಣುಕವೊಂದನ್ನ ಐಸಿಸಿ ತನ್ನ ಟ್ವಿಟ್ಟರ್​ ಅಕೌಂಟ್​​ನಲ್ಲಿ ಶೇರ್​ ಮಾಡಿದೆ. ಹಾಲಿ ಚಾಂಪಿಯನ್​ ಅಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜೆಮೈಮಾ ರಾಡ್ರಿಗಸ್ ಕೇವಲ 26 ಎಸೆತಗಳಲ್ಲಿ 33ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.