ETV Bharat / sports

ಸ್ಟಾರ್​ ಬೌಲರ್​ಗೆ ಗಾಯ... ಕಿವೀಸ್​ ಪ್ರವಾಸಕ್ಕೂ ಮುನ್ನವೇ ಕೊಹ್ಲಿ ಪಡೆಗೆ ಆಘಾತ - ಇಶಾಂತ್​ ಬದಲು ಟೆಸ್ಟ್​ ತಂಡಕ್ಕೆ ನವದೀಪ್​ ಸೈನಿ

ದೆಹಲಿ ರಣಜಿ ತಂಡದ ಪರ ಆಡುವ ಇಶಾಂತ್ ಶರ್ಮಾ​ ವಿದರ್ಭ ವಿರುದ್ಧ ಬೌಲಿಂಗ್ ಮಾಡುವ ವೇಳೆ ಹಿಮ್ಮಡಿ ನೋವಿಗೆ ತುತ್ತಾಗಿದ್ದಾರೆ. ಈಗಾಗಲೇ ಚಿಕಿತ್ಸೆ ಪಡೆದಿರುವ ಅವರಿಗೆ ವೈದ್ಯರು 6 ವಾರಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿರುವ ಹಿನ್ನಲೆ ಫೆಬ್ರುವರಿಯಿಂದ ಆರಂಭವಾಗಲಿರುವ ಕಿವೀಸ್​​ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ.

Ishant Sharma out of New Zealand Test series

author img

By

Published : Jan 21, 2020, 7:02 PM IST

ನವದೆಹಲಿ: ಭಾರತ ತಂಡದ ಸ್ಟಾರ್​ ವೇಗದ ಬೌಲರ್​ ಇಶಾಂತ್​ ಶರ್ಮಾ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದು, ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ.

ದೆಹಲಿ ರಣಜಿ ತಂಡದ ಪರ ಆಡುವ ಇಶಾಂತ್​ ವಿದರ್ಭ ವಿರುದ್ಧ ಬೌಲಿಂಗ್ ಮಾಡುವ ವೇಳೆ ಹಿಮ್ಮಡಿ ನೋವಿಗೆ ತುತ್ತಾಗಿದ್ದಾರೆ. ಈಗಾಗಲೇ ಚಿಕಿತ್ಸೆ ಪಡೆದಿರುವ ಅವರಿಗೆ ವೈದ್ಯರು 6 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿರುವ ಹಿನ್ನಲೆ ಫೆಬ್ರವರಿಯಿಂದ ಆರಂಭವಾಗಲಿರುವ ಕಿವೀಸ್​​ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ.

Ishant Sharma
ಇಶಾಂತ್​ ಶರ್ಮಾ

"ಇಶಾಂತ್​ ಶರ್ಮಾ ಅವರ ಎಂಆರ್​ಐ ವರದಿಯಲ್ಲಿ ಹಿಮ್ಮಡಿಗೆ ಗಂಭೀರ ಗಾಯವಾಗಿರುವುದು ಖಚಿತವಾಗಿದೆ. ಆದ್ದರಿಂದ ವೈದ್ಯರು 6 ವಾರಗಳ ಕಾಲ ವಿಶ್ರಾಂತಿ ಪಡೆದು ಪುನಶ್ಚೇತನಕ್ಕೆ ತೆರಳಲು ಸೂಚಿಸಿದ್ದಾರೆ. ಇದೊಂದು ದೊಡ್ಡ ಆಘಾತ" ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್​ ತಿಹಾರ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಕುರಿತು ಮತ್ತೋರ್ವ ಅಧಿಕಾರಿ ಮಾತನಾಡಿದ್ದು, "ಇಶಾಂತ್​ ಅದೃಷ್ಟಕ್ಕೆ ಮೂಳೆ ಮುರಿದಿಲ್ಲ. ಕೇವಲ ಹಿಮ್ಮಡಿ ತಿರುವಿದೆ, ಅವರೀಗ ನಡೆದಾಡಲು ಸಾಧ್ಯವಿದೆ, ಅವರು ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.

ಇಶಾಂತ್​ ಬದಲು ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ದೆಹಲಿಯವರೇ ಆದ ನವದೀಪ್​ ಸೈನಿ ಆಯ್ಕೆಯಾಗುವ ಸಾಧ್ಯತೆಯಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.