ಕರಾಚಿ: ವಿಶ್ವಕಪ್ನಲ್ಲಿ ಕೊಹ್ಲಿ ಪಡೆ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ಈಗಾಗಲೇ ತಾನಾಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಕಳೆದ ಭಾನುವಾರ ಪಾಕ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಅದಕ್ಕೆ ಕಾರಣ ಏನು ಎಂಬ ಮಾಹಿತಿಯನ್ನ ಇದೀಗ ಪಾಕ್ನ ಮಾಜಿ ಆಲ್ರೌಂಡರ್ ಹೊರಹಾಕಿದ್ದಾರೆ.
-
Congratulations to @BCCI on a well deserved win today. The standard of cricket being played has been exceptionally high & credit goes to IPL for not only helping identify & harness talent, but also in equipping younger players with pressure handling techniques #CWC19 #PAKVIND https://t.co/MfiwQxwjrK
— Shahid Afridi (@SAfridiOfficial) June 16, 2019 " class="align-text-top noRightClick twitterSection" data="
">Congratulations to @BCCI on a well deserved win today. The standard of cricket being played has been exceptionally high & credit goes to IPL for not only helping identify & harness talent, but also in equipping younger players with pressure handling techniques #CWC19 #PAKVIND https://t.co/MfiwQxwjrK
— Shahid Afridi (@SAfridiOfficial) June 16, 2019Congratulations to @BCCI on a well deserved win today. The standard of cricket being played has been exceptionally high & credit goes to IPL for not only helping identify & harness talent, but also in equipping younger players with pressure handling techniques #CWC19 #PAKVIND https://t.co/MfiwQxwjrK
— Shahid Afridi (@SAfridiOfficial) June 16, 2019
ಟೀಂ ಇಂಡಿಯಾ ವಿಶ್ವಕಪ್ನಲ್ಲಿ ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು,ಅದಕ್ಕೆ ಮುಖ್ಯ ಕಾರಣವಾಗಿರುವುದು ಇಂಡಿಯನ್ ಪ್ರೀಮಿಯರ್ ಲೀಗ್ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಪಡೆಯಿಂದ ವಿಶ್ವಕಪ್ನಲ್ಲಿ ಅದ್ಭುತ ಕ್ರಿಕೆಟ್ ಮೂಡಿ ಬರುತ್ತಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಕಲೆ ಎಲ್ಲ ಆಟಗಾರರಲ್ಲೂ ಕರಗತವಾಗಿದೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಪ್ರಥಮ ದರ್ಜೆ ಕ್ರಿಕೆಟ್ಗೂ ಹೆಚ್ಚಿನ ಗಮನ ಹರಿಸುತ್ತಿದ್ದು, ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಟೀಂ ಇಂಡಿಯಾ ಸೇರಿಕೊಳ್ಳುತ್ತಿರುವ ಪ್ಲೇಯರ್ಸ್ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ ಭಾನುವಾರ ನಡೆದ ವಿಶ್ವಕಪ್ನ ಇಂಡಿಯಾ - ಪಾಕ್ ಪಂದ್ಯದಲ್ಲಿ ಕೊಹ್ಲಿ ಪಡೆ 89 ರನ್ಗಳ ಗೆಲುವಿನ ನಗೆ ಬೀರಿತು.