ETV Bharat / sports

ಸಿಎಸ್​ಕೆ ಸೇರಿದ ' ಫ್ರೆಶರ್ಸ್​​​'​ಗೆ ಈ ರೀತಿ ವೆಲ್​​ಕಮ್​ ಮಾಡಿಕೊಂಡ್ರು ಧೋನಿ!

author img

By

Published : Apr 7, 2021, 10:51 PM IST

ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ಗೆ ಹೊಸ ಪ್ಲೇಯರ್ಸ್​ ಸೇರ್ಪಡೆಗೊಂಡಿದ್ದು, ಅದರನ್ನ ತಂಡದ ಕ್ಯಾಪ್ಟನ್​ ವೆಲ್​ಕಮ್​ ಮಾಡಿಕೊಂಡಿದ್ದಾರೆ.

CSK new players
CSK new players

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ಬರುವ ಏಪ್ರಿಲ್​ 9ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಎಲ್ಲ ತಂಡಗಳು ಕೊನೆ ಕ್ಷಣದ ತಯಾರಿಯಲ್ಲಿವೆ. ಇದರ ಮಧ್ಯೆ ಅನೇಕ ಪ್ಲೇಯರ್ಸ್​ ಹೊಸ ತಂಡ ಸೇರಿಕೊಂಡಿದ್ದು, ಅವರಿಗೆ ಅದ್ಧೂರಿಯಾಗಿ ವೆಲ್​ಕಮ್​ ಮಾಡಿಕೊಳ್ಳಲಾಗಿದೆ.

ಇದೀಗ ಚೆನ್ನೈ ಸೂಪರ್ ಕಿಂಗ್ಸ್​ ಸೇರಿರುವ ಅನೇಕ ಪ್ಲೇಯರ್ಸ್​ಗಳನ್ನ ತಂಡದ ಕ್ಯಾಪ್ಟನ್​ ಧೋನಿ ವೆಲ್​ಕಮ್​ ಮಾಡಿಕೊಂಡಿದ್ದಾರೆ. ಸಿಎಸ್​ಕೆ ಬಳಗಕ್ಕೆ ಹೊಸದಾಗಿ ರಾಬಿನ್​ ಉತ್ತಪ್ಪ, ಮೊಯಿನ್ ಅಲಿ, ಕೃಷ್ಣಪ್ಪ ಗೌತಮ್​, ಚೇತೇಶ್ವರ್​ ಪೂಜಾರಾ, ಹರಿ ನಿಶಾಂತ್​, ಹರಿಶಂಕರ್​​ ರೆಡ್ಡಿ ಹಾಗೂ ಕೆ. ಭಗತ್​ ವರ್ಮಾ ಸೇರಿಕೊಂಡಿದ್ದು, ಅವರನ್ನ ಧೋನಿ ತಂಡದ ಜರ್ಸಿ ನೀಡುವ ಮೂಲಕ ವೆಲ್​​ಕಮ್ ಮಾಡಿಕೊಂಡಿದ್ದಾರೆ. ಇದರ ಫೋಟೋ ಸಿಎಸ್​ಕೆ ತನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿದೆ.

ಇದನ್ನೂ ಓದಿ: ಸಾಮ್ಸನ್​ ನಾಯಕತ್ವ, ಲೆಜೆಂಡರಿ ಸಂಗಾಕ್ಕರ ಮಾರ್ಗದರ್ಶನ: 2ನೇ ಕಪ್​ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನದ​ ಬಲಾಬಲ ಹೀಗಿದೆ

ಅತಿ ಹೆಚ್ಚಿನ ಹಣ ನೀಡಿ ಖರೀದಿ ಮಾಡಿರುವ ಅನ್​ಕ್ಯಾಪ್ಡ್​ ಪ್ಲೇಯರ್​​ ಕೆ. ಗೌತಮ್​ಗೆ 9.25 ಕೋಟಿ ರೂ. ನೀಡಲಾಗಿದ್ದು, ಅವರ ಜರ್ಸಿ ನಂಬರ್​​ 79 ಆಗಿದೆ. ಚೇತೇಶ್ವರ್ ಪೂಜಾರಾಗೆ 25ರ ಜರ್ಸಿ ನಂಬರ್ ನೀಡಲಾಗಿದ್ದು, ರಾಬಿನ್​ ಉತ್ತಪ್ಪ 77 ಜರ್ಸಿ ನಂಬರ್​ನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಏಪ್ರಿಲ್​ 10ರಂದು ಚೆನ್ನೈ ಸೂಪರ್​ ಕಿಂಗ್ಸ್​ ಡೆಲ್ಲಿ ಕ್ಯಾಪಿಟಲ್​ ಜತೆ ಮೊದಲ ಪಂದ್ಯ ಆಡುವುದರೊಂದಿಗೆ ಅಭಿಯಾನ ಆರಂಭ ಮಾಡಲಿದ್ದು, ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯ ಏಪ್ರಿಲ್​ 9ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಚೆನ್ನೈನಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.