ದುಬೈ: ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 37 ರನ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರು, ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ್ 3ನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಆರ್ಆರ್ 137 ರನ್ಗಳಿಸಲಷ್ಟೇ ಶಕ್ತವಾಗಿ 37 ರನ್ಗಳ ಸೋಲಿಕಂಡಿದೆ.
ರಾಜಸ್ಥಾನ್- ಕೋಲ್ಕತ್ತಾ ಪಂದ್ಯದ ಪ್ರಮುಖ ಅಂಕಿ ಅಂಶಗಳು
- 34 ರನ್ಗಳಿಸಿದ ಕೆಕೆಆರ್ ಇಯಾನ್ ಮಾರ್ಗನ್ ಟಿ-20 ಕ್ರಿಕೆಟ್ನಲ್ಲಿ 6,500 ರನ್ ಪೂರೈಸಿದ 4ನೇ ಇಂಗ್ಲೆಂಡ್ ಬ್ಯಾಟ್ಸ್ಮನ್ ಎನಿಸಿಕೊಂಡರು. ಇವರಿಗೂ ಮುನ್ನ ಲೂಕ್ ರೈಟ್(7,962) ಅಲೆಕ್ಸ್ ಹೇಲ್ಸ್(7,313), ರವಿ ಬೊಪೆರಾ 7,229 ರನ್ಗಳಿಸಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.
- ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯಲು ಯಶಸ್ವಿಯಾದ ಕುಲ್ದೀಪ್ ಯಾದವ್ ಕೆಎಕಾರ್ ಪರ 40 ವಿಕೆಟ್ ಪಡೆದ 7ನೇ ಬೌಲರ್ ಎನಿಸಿಕೊಂಡರು.
- ಮತ್ತೊಬ್ಬ ಸ್ಪಿನ್ನರ್ ಸುನೀಲ್ ನರೈನ್ ಕೂಡ ಒಂದು ವಿಕೆಟ್ ಪಡೆದಿದ್ದರು. ಇವರು ಟಿ-20 ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ನರೈನ್ 386 ವಿಕೆಟ್ ಪಡೆದಿದ್ದರೆ, ಬ್ರಾವೋ 506 ಹಾಗೂ ಲಸಿತ್ ಮಾಲಿಂಗ 390 ವಿಕೆಟ್ ಪಡೆದರು ಮೊದಲೆರಡು ಸ್ಥಾನದಲ್ಲಿದ್ದಾರೆ.
- ಪಂದ್ಯದಲ್ಲಿ 2 ಕ್ಯಾಚ್ ಪಡೆದ ದಿನೇಶ್ ಕಾರ್ತಿಕ್ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಲಿ ಪಡೆದ 3 ನೇ ವಿಕೆಟ್ ಕೀಪರ್ ಎನಿಸಿಕೊಂಡರು. ಧೋನಿ(253)ಹಾಗೂ ಪಾಕಿಸ್ತಾನ ಕಮ್ರನ್ ಅಕ್ಮಲ್(238) ಮೊದೆಲೆರಡು ಸ್ಥಾನಗಳಲ್ಲಿದ್ದಾರೆ.
- ಇದರ ಜೊತೆಗೆ ಟಿ-20 ಕ್ರಿಕೆಟ್ನಲ್ಲಿ 157ನೇ ಕ್ಯಾಚ್ ಪಡೆದ ಕಾರ್ತಿಕ್, ಧೋನಿ(169) ನಂತರ ಹೆಚ್ಚು ಕ್ಯಾಚ್ ಪಡೆದ ಕೀಪರ್ ಎನಿಸಿಕೊಂಡರು.
- 185 ನೇ ಪಂದ್ಯವನ್ನಾಡಿದ ಕಾರ್ತಿಕ್ ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳನ್ನಾಡಿರುವ ಮೂರನೇ ಆಟಗಾರ ಎನಿಸಿಕೊಂಡರು. ಧೋನಿ ಹಾಗೂ ರೈನಾ(193) ಹಾಗೂ 2ನೇ ಸ್ಥಾನದಲ್ಲಿ ರೋಹಿತ್ ಶರ್ಮಾ(191) ಇದ್ದಾರೆ.
- ಈ ಗೆಲುವು ಕೆಕೆಆರ್ ತಂಡಕ್ಕೆ 94ನೇ ಗೆಲುವಾಗಿದ್ದಕ್ಕೆ, ಟೂರ್ನಮೆಂಟ್ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ 3ನೇ ತಂಡ ಎನಿಸಿಕೊಂಡಿತು. ಮೊದಲ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್(108) 2ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(101)