ETV Bharat / sports

ಐಪಿಎಲ್​ ವೀಕ್ಷಣೆಯಲ್ಲಿ ದಾಖಲೆ: ಕಳೆದ ವರ್ಷಕ್ಕಿಂತ ಶೇ.28ರಷ್ಟು ಏರಿಕೆ - IPL 13 viewership

ಈ ಡಾಟಾ ಪ್ರಕಾರ 13ನೇ ಆವೃತ್ತಿಯಲ್ಲಿ ಪ್ರತಿ ಪಂದ್ಯದ ವೀಕ್ಷಣೆಯೂ ಹಿಂದಿನ ಆವೃತ್ತಿಗಿಂತ ಹೆಚ್ಚಾಗಿದೆ. ಪ್ರೇಕ್ಷಕರಿಗೆ ಅವಕಾಶವಿಲ್ಲದ್ದರಿಂದ ಹಾಗೂ ಲಾಕ್​ಡೌನ್​ ವಿರುವುದರಿಂದ ಈ ಬಾರಿ ಐಪಿಎಲ್​ ವೀಕ್ಷಣೆಯಲ್ಲಿ ಭಾರಿ ಏರಿಕೆ ಕಾಣಲು ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ಐಪಿಎಲ್ ವೀಕ್ಷಣೆ
ಐಪಿಎಲ್ ವೀಕ್ಷಣೆ
author img

By

Published : Oct 31, 2020, 6:33 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ 2020ರ ಆವೃತ್ತಿ ವರ್ಷಕ್ಕಿಂತ ಹೆಚ್ಚಿನ ವೀಕ್ಷಕರ ಸಂಖ್ಯೆಯನ್ನು ಗಳಿಸಿಕೊಂಡಿದೆ ಎಂದು ಬ್ರೋಡ್​ಕಾಸ್ಟ್​ ಆಡಿಯನ್ಸ್​ ರೀಸರ್ಚ್​ ಕೌನ್ಸಿಲ್​(ಬಾರ್ಕ್) ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದುಬಂದಿದೆ.

ಕ್ರಿಕೆಟ್​ಅನ್ನು ಸಾಮಾನ್ಯ ಸ್ಥಿತಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ಐಪಿಎಲ್​ಗೆ ವೀಕ್ಷಕರ ಆಶೀರ್ವಾದವಾಗಿದೆ. ದತ್ತಾಂಶಗಳ ಪ್ರಕಾರ ಕಳೆದ ಋತುವಿಗಿಂತ 13ನೇ ಆವೃತ್ತಿ ಐಪಿಎಲ್​ ಹೆಚ್ಚಿನ ವೀಕ್ಷಕರನ್ನು ಸೆಳೆಯುತ್ತಿದೆ ಎಂದು ಬಾರ್ಕ್​ ಇಂಡಿಯಾ ಟ್ವೀಟ್​ ಮೂಲಕ ತಿಳಿಸಿದೆ.

ಬಾರ್ಕ್​ ಬಿಡುಗಡೆ ಮಾಡಿರು ಡಾಟಾ ಪ್ರಕಾರ 13ನೇ ಆವೃತ್ತಿಯ 41 ಪಂದ್ಯಗಳು 21 ಚಾನೆಲ್​ನಲ್ಲಿ ಸುಮಾರು 7 ಬಿಲಿಯನ್​​ ನಿಮಿಷಗಳ ವೀಕ್ಷಣೆ ಕಂಡಿದೆ. ಈ ಹಂತದಲ್ಲಿ 2019ರ ಆವೃತ್ತಿಗೆ ಹೋಲಿಸಿದರೆ ವೀಕ್ಷಣೆಯಲ್ಲಿ ಶೇಕಡಾ 28ರಷ್ಟು ಹೆಚ್ಚಾಗಿದೆ. 12ನೇ ಆವೃತ್ತಿಯ ಐಪಿಎಲ್ 44 ಪಂದ್ಯಗಳವರೆಗೆ 24 ಚಾನೆಲ್​ಗಳಲ್ಲಿ​ 5.5 ಬಿಲಿಯನ್ ವೀಕ್ಷಣೆ ಪಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.