ETV Bharat / sports

ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್​ಗಳೇ ತಂಡಗಳಿಗೆ ಟ್ರಂಪ್​ಕಾರ್ಡ್​: ಯಾವ ತಂಡದಲ್ಲಿ ಯಾರಿದ್ದಾರೆ ನೋಡಿ..

author img

By

Published : Oct 6, 2020, 8:56 PM IST

ಐಪಿಎಲ್ ಇತಿಹಾಸದಲ್ಲಿ ಅಂಕಿ ಅಂಶಗಳನ್ನು ಅವಲೋಕಿಸಿದರೆ ಲೀಗ್​ನಲ್ಲಿ ಸಾರ್ವಕಾಲಿಕ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿರುವ ಮೂವರಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳು ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಟಿ 20 ಫಾರ್ಮ್ಯಾಟ್‌, ಅದರಲ್ಲೂ ನಿರ್ದಿಷ್ಟವಾಗಿ ಐಪಿಎಲ್‌ನಲ್ಲಿ ಲೆಗ್ಗಿಗಳು ಹೆಚ್ಚು ವಿಶ್ವಾಸಾರ್ಹ ಬೌಲರ್​ಗಳು ಎಂಬುದು ಕುತೂಹಲ ಕೆರಳಿಸಿದೆ.

ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್ ಪ್ರಾಬಲ್ಯ
ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್ ಪ್ರಾಬಲ್ಯ

ದುಬೈ: ಯುಎಇನಲ್ಲಿ ನಡೆಯುತ್ತಿರುವ 13ನೇ ಐಪಿಎಲ್​ನಲ್ಲಿ ವೇಗಿಗಳಿಗಿಂತ ಹೆಚ್ಚು ಸ್ಪಿನ್ನರ್​ಗಳಿಗೆ ನೆರವಾಗುತ್ತದೆ ಎಂಬ ಮಾತು ಐಪಿಎಲ್ ಆರಂಭಕ್ಕಿಂತಲೂ ಮೊದಲೇ ಕೇಳಿಬರುತ್ತಿತ್ತು. ಇದೀಗ ಆ ಮಾತು ನಿಜವಾಗುತ್ತಿದೆ.

ಐಪಿಎಲ್ ಇತಿಹಾಸದಲ್ಲಿ ಅಂಕಿ ಅಂಶಗಳನ್ನು ಅವಲೋಕಿಸಿದರೆ ಲೀಗ್​ನಲ್ಲಿ ಸಾರ್ವಕಾಲಿಕ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿರುವ ಮೂವರಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳು ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಟಿ 20 ಫಾರ್ಮ್ಯಾಟ್‌, ಅದರಲ್ಲೂ ನಿರ್ದಿಷ್ಟವಾಗಿ ಐಪಿಎಲ್‌ನಲ್ಲಿ ಲೆಗ್ಗಿಗಳು ಹೆಚ್ಚು ವಿಶ್ವಾಸಾರ್ಹ ಬೌಲರ್​ಗಳು ಎಂಬುದು ಕುತೂಹಲಕಾರಿ ಸಂಗತಿ.

ಪ್ರಸ್ತುತ ಐಪಿಎಲ್​ನಲ್ಲಿ ನೋಡುವುದಾದರೆ ಲೆಗ್​ ಸ್ಪಿನ್ನರ್​ಗಳು ಆರಂಭದಲ್ಲೇ ಟ್ರೆಂಡ್​ ಸೆಟ್​ ಮಾಡುವ ಮೂಲಕ ಅವರ ಮೇಲಿರುವ ನಿರೀಕ್ಷೆಗಳನ್ನು ಹುಸಿಗೊಳಿಸಿಲ್ಲ. ಟೂರ್ನಿಯಲ್ಲಿ ಆರ್​ಸಿಬಿ ತಂಡದ ಚಹಾಲ್​ ಸೋಮವಾರ ಡೆಲ್ಲಿ ಪಂದ್ಯವನ್ನು ಹೊರತುಪಡಿಸಿದರೆ, ಆಡಿರುವ 5 ಪಂದ್ಯಗಳಲ್ಲೂ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚು ವಿಕೆಟ್​ ಪಡೆದ ಪಟ್ಟಿಯಲ್ಲಿ ರಬಾಡ ನಂತರದಲ್ಲಿ ಸ್ಥಾನ ಪಡೆದಿದ್ದಾರೆ.

ಯಜುವೇಂದ್ರ ಚಹಾಲ್​
ಯಜುವೇಂದ್ರ ಚಹಾಲ್​

ಮುಂಬೈ ತಂಡದ ರಾಹುಲ್ ಚಹಾರ್​ ಆಡಿರುವ 5 ಪಂದ್ಯಗಳಲ್ಲಿ 6 ವಿಕೆಟ್​, ಸಿಎಸ್​ಕೆ ತಂಡದ ಪಿಯೂಷ್​ ಚಾವ್ಲಾ 5 ಪಂದ್ಯಗಳಿಂದ 6 ವಿಕೆಟ್​, ಹೈದರಾಬಾದ್ ತಂಡದ ರಶೀದ್ ಖಾನ್​ 5 ಪಂದ್ಯಗಳಲ್ಲಿ 5 ವಿಕೆಟ್​, ಪಂಜಾಬ್ ತಂಡದ ಯುವ ಬೌಲರ್​ ಮುರುಗನ್ ಅಶ್ವಿನ್​ 2 ಪಂದ್ಯಗಳಲ್ಲಿ 4 ವಿಕೆಟ್​, ರಾಜಸ್ಥಾನ್​ ತಂಡದ ತೆವಾಟಿಯಾ 4 ಪಂದ್ಯಗಳಲ್ಲಿ 4 ವಿಕೆಟ್​ ಪಡೆಯುವ ಮೂಲಕ ಹೆಚ್ಚು ವಿಕೆಟ್ ಪಡೆದಿರುವ ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್​
ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್​

ರಾಹುಲ್ ತೆವಾಟಿಯಾ ಹಾಗೂ ಚಾವ್ಲಾ ಹೊರತುಡಪಡಿಸಿದರೆ ಉಳಿದೆಲ್ಲಾ ಬೌಲರ್​ಗಳು 8 ರ ಎಕಾನಮಿ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆವೃತ್ತಿ ಮುಂದುವರಿದಂತೆ ಚಿಕ್ಕ ಮೈದಾನವನ್ನು ಹೊಂದಿರುವ ಶಾರ್ಜಾ ಹೊರತುಪಡಿಸಿ ಉಳಿದೆರಡು ಕ್ರೀಡಾಂಗಣದಲ್ಲಿ ಲೆಗ್​ ಸ್ಪಿನ್ನರ್​ಗಳು ಮತ್ತಷ್ಟು ಕಾರ್ಯರೂಪಕ್ಕೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಈಗಾಗಲೇ ಆರ್​ಸಿಬಿ ಮತ್ತು ಭಾರತ ತಂಡದ ಸ್ಟಾರ್ ಸ್ಪಿನ್ನರ್​ ಅಭಿಪ್ರಾಯದಂತೆ, ಚಿನ್ನಸ್ವಾಮಿಯಲ್ಲಿ ನಾವು ಟೂರ್ನಿಯ 7 ಪಂದ್ಯಗಳನ್ನಾಡುತ್ತಿದ್ದೆವು. ಆದರೆ ಚಿಕ್ಕ ಕ್ರೀಡಾಂಗಣವಾದ ಶಾರ್ಜಾದಲ್ಲಿ ಕೇವಲ ಮೂರು ಪಂದ್ಯಗಳನ್ನಾಡಲಿದ್ದೇವೆ. ಶಾರ್ಜಾದಲ್ಲಿ ಬೌಂಡರಿ- ಸಿಕ್ಸರ್​ಗಳು ಹೆಚ್ಚು ಹೋಗಬಹುದು ಎಂದಿರುವ ಅವರು, ವಿಕೆಟ್ ಹೆಚ್ಚು ತಿರುಗಿದರೆ ನಿಮ್ಮನ್ನು ನಿಯಂತ್ರಿಸಲು ತುಂಬಾ ಕಷ್ಟ ಎಂದಿದ್ದಾರೆ.

ಆದರೆ ಉಳಿದ ಎರಡು (ಅಬುದಾಬಿ ಮತ್ತು ದುಬೈ) ಕ್ರೀಡಾಂಗಣದಲ್ಲಿ ದೊಡ್ಡ ಬೌಂಡರಿಗಳಿರುವುದರಿಂದ ಕೆಲವೊಮ್ಮೆ ಶಾರ್ಟ್​ ಬಾಲ್​ಗಳಿಗೂ ನೀವು ವಿಕೆಟ್​ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.