ಕರಾಚಿ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಭವಿಷ್ಯದಲ್ಲಿ ಸರಸಾಟಿಯಿಲ್ಲದ ಬ್ಯಾಟ್ಸ್ಮನ್ ಆಗಲಿದ್ದಾರೆ ಎಂದು ಪಾಕಿಸ್ತಾನ ಮಾಜಿ ಬೌಲರ್ ಶೋಯಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ.
21 ವರ್ಷದ ಶುಬ್ಮನ್ ಗಿಲ್ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 45 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 35 ರನ್ಗಳಿಸಿದ್ದರು.
ಮೊದಲ ಟೆಸ್ಟ್ನಲ್ಲಿ ಭಾರತ ಹೀನಾಯ ಸೋಲು ಕಂಡರು. ಎರಡನೇ ಟೆಸ್ಟ್ನಲ್ಲಿ ಉತ್ತಮವಾಗಿ ಕಮ್ಬ್ಯಾಕ್ ಮಾಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಖ್ತರ್, ಈ ಪಂದ್ಯದಲ್ಲಿ ಡೆಬ್ಯೂಟ್ ಮಾಡಿದ ಸಿರಾಜ್ ಹಾಗೂ ಗಿಲ್ ಅವರನ್ನು ಪ್ರಶಂಸಿದ್ದಾರೆ.
ಇದನ್ನು ಓದಿ: ರಹಾನೆ - ಕೊಹ್ಲಿ ಭಾರತೀಯರು, ಇಬ್ಬರ ಮಧ್ಯೆ ಹೋಲಿಕೆ ಮಾಡುವುದು ಬೇಡ : ಸಚಿನ್
ಸಿರಾಜ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದು ದುರದೃಷ್ಟಕರವಾದರೂ, ಅವರ ತಂದೆ ಕಂಡ ಕನಸನ್ನು ನನಸು ಮಾಡಿ ಅವರ ತಂದೆಗೆ ಗೌರವ ತಂದುಕೊಟ್ಟಿದ್ದಾರೆ. ತಮ್ಮಲ್ಲಿದ್ದ ಹತಾಶೆ ಮತ್ತು ಕೋಪವನ್ನು ಆಸ್ಟ್ರೇಲಿಯಾ ಮೇಲೆ ತೋರಿ ಪದಾರ್ಪಣೆ ಪಂದ್ಯವನ್ನ ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು. ಸಿರಾಜ್ ಎರಡೂ ಇನ್ನಿಂಗ್ಸ್ ಸೇರಿ 5 ವಿಕೆಟ್ ಪಡೆದಿದ್ದರು.
ಇನ್ನು ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶುಬ್ಮನ್ ಗಿಲ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಪೀಡ್ ಕಿಂಗ್, ಗಿಲ್ ಎರಡೂ ಇನ್ನಿಂಗ್ಸ್ಗಳಲ್ಲಿಯೂ ಉತ್ತಮವಾಗಿ ಆಡಿದರು. ನಾವು ಅವರು ಭವಿಷ್ಯದಲ್ಲಿ ಒಬ್ಬ ಸರಿಸಾಟಿಯಿಲ್ಲದ ಬ್ಯಾಟ್ಸ್ಮನ್ ಆಗುವುದನ್ನು ನೋಡಲಿದ್ದೇವೆ ಎಂದು ಕೊಂಡಾಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವನ 3ನೇ ಟೆಸ್ಟ್ ಪಂದ್ಯ ಜನವರಿ 7ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಈ ಪಂದ್ಯ ಎರಡೂ ತಂಡಕ್ಕೂ ಸರಣಿ ಗೆಲ್ಲುವ ದೃಷ್ಟಿಯಲ್ಲಿ ಮಹತ್ವದ್ದಾಗಿದೆ.