ಆ್ಯಂಟಿಗೋವಾ: ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಗೆದ್ದಿದ್ದ ಭಾರತ ರ ತಂಡ ಸರಣಿಯಲ್ಲಿ ಮೊದಲ ಬಾರಿಗೆ ಸೋಲು ಕಂಡಿದೆ.
ನಿನ್ನೆ ನಡೆದ ನಾಲ್ಕನೇ ಅನಧಿಕೃತ ಪಂದ್ಯದಲ್ಲಿ ಭಾರತ ಎ ತಂಡ 5 ರನ್ಗಳಿಂದ ಸೋಲುಕಂಡಿದೆ. ವಿಂಡೀಸ್ ನೀಡಿದ್ದ 299 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ 50 ಓವರ್ಗಳಲ್ಲಿ 293 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ರೋಚಕ ಸೋಲುಕಂಡಿತು.
299ರನ್ಗಳ ಗುರಿ ಪಡೆ ಭಾರತ ಎ ತಂಡಕ್ಕೆ ಕೃನಾಲ್ ಪಾಂಡ್ಯ 45 ರನ್, ಮನೀಷ್ ಪಾಂಡೆ 24 ರನ್ ವಾಷಿಂಗ್ಟನ್ ಸುಂದರ್ 45 ರನ್ ಅಕ್ಷರ್ ಪಟೇಲ್ 63 ಎಸೆತಗಳಲ್ಲಿ 81 ರನ್ಗಳಿಸಿ ಕೊನೆವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಯ ಓವರ್ನಲ್ಲಿ ಗೆಲುವಿಗೆ ಅಗತ್ಯವಿದ್ದ 9 ರನ್ ಬದಲು ಕೇವಲ 3 ರನ್ಗಳಿಸಿದ ಭಾರತೀಯ ಪಡೆ ಕೈಯಲ್ಲಿದ್ದ ಗೆಲುವನ್ನು ಕಳೆದುಕೊಂಡಿತು.
ವಿಂಡೀಸ್ ಪರ ಕೀಮೋ ಪಾಲ್- 2, ರೊವ್ಮನ್ ಪೊವೆಲ್ 2, ಖಾರಿ ಪಿಯಿರೆ, ರೋಸ್ಟನ್ ಚೇಸ್ ಹಾಗೂ ರಾಯ್ಮನ್ ರೀಫೆರ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ತಂಡದ ಪರ ಸುನಿಲ್ ಆ್ಯಂಬ್ರಿಸ್ 46, ಡೆವೋನ್ ಸ್ಮಿತ್ 70, ರೋಸ್ಟನ್ ಚೇಸ್ 84, ಜೋನಾಥನ್ ಕಾರ್ಟರ್ 50 ರನ್ ಗಳಿಸಿದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕಾರಣರಾದರು.
ಭಾರತದ ಪರ ಖಲೀಲ್ ಅಹ್ಮದ್ 4, ಆವೇಶ್ ಖಾನ್ 3 ಕೃನಾಲ್ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.