ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಟಿ20 ಸರಣಿಯ ಇನ್ನುಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ.
ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಜಡೇಜಾ, 23 ಎಸೆತಗಳಿಗೆ 44 ರನ್ ಸಿಡಿಸಿ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದರು. ಆದರೆ ಪಂದ್ಯದ ಅಂತಿಮ ಓವರ್ನಲ್ಲಿ ಜಡೇಜಾ ತಲೆಗೆ ಚೆಂಡು ಬಡಿದು ಗಾಯವಾಗಿತ್ತು.
-
ALERT 🚨: Ravindra Jadeja ruled out, Shardul Thakur added to #TeamIndia squad for T20I series against Australia #AUSvIND
— BCCI (@BCCI) December 4, 2020 " class="align-text-top noRightClick twitterSection" data="
More details here 👉https://t.co/MBw2gjArqU pic.twitter.com/E3a3PkC1UF
">ALERT 🚨: Ravindra Jadeja ruled out, Shardul Thakur added to #TeamIndia squad for T20I series against Australia #AUSvIND
— BCCI (@BCCI) December 4, 2020
More details here 👉https://t.co/MBw2gjArqU pic.twitter.com/E3a3PkC1UFALERT 🚨: Ravindra Jadeja ruled out, Shardul Thakur added to #TeamIndia squad for T20I series against Australia #AUSvIND
— BCCI (@BCCI) December 4, 2020
More details here 👉https://t.co/MBw2gjArqU pic.twitter.com/E3a3PkC1UF
ಗಾಯಾಳು ಜಡೇಜಾ ಬದಲು ಕಣಕ್ಕಿಳಿದಿದ್ದ ಯಜುವೇಂದ್ರ ಚಾಹಲ್ 25 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದ್ರು. ಉತ್ತಮವಾಗಿ ಸ್ಪೆಲ್ ಮಾಡಿದ ಚಹಾಲ್ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸದ್ಯ ಜಡೇಜಾ ಅವಲೋಕನೆಯಲ್ಲಿದ್ದು, ಅಗತ್ಯವಿದ್ದರೆ ಶನಿವಾರ ಹೆಚ್ಚಿನ ಸ್ಕ್ಯಾನ್ ನಡೆಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಜಡೇಜಾ ಅವರ ಬದಲು ಶಾರ್ದೂಲ್ ಠಾಕೂರ್ ಟಿ20 ತಂಡ ಸೇರಿಕೊಂಡಿದ್ದಾರೆ.