ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಗಳು ತೋರಿದ ಅಮೋಘ ಪ್ರದರ್ಶನದಿಂದ ಅಸೀಸ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಭಾರತ ಎ ತಂಡ 86 ರನ್‌ಗಳ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆರಂಭಿಕ ಆಟಗಾರ ಪೃಥ್ವಿ ಶಾ 40 ಮತ್ತು ಶುಬ್ಮನ್ ಗಿಲ್ 43 ರನ್ ಗಳಿಸಿದ್ದು ಬಿಟ್ಟರೆ ಟೀಂ ಇಂಡಿಯಾದ ಯಾವುದೇ ಆಟಗಾರರು ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ.
ಟೀಂ ಇಂಡಿಯಾಕ್ಕೆ ಆಸರೆಯಾದ ಬುಮ್ರಾ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. 57 ಎಸೆತಗಳನ್ನು ಎದುರಿಸಿದ ಬುಮ್ರಾ, 6 ಬೌಂಡರಿ ಮತ್ತು ಎರಡು ಸಿಕ್ಸರ್ಗಳ ನೆರವಿನಿಂದ 55 ರನ್ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ ಸಿಡಿಸಿದ್ರು.
-
Sustained pressure from the Indian quicks and Australia A have been bowled out for 108. India lead by 86 runs.
— BCCI (@BCCI) December 11, 2020 " class="align-text-top noRightClick twitterSection" data="
20 wickets have fallen on Day 1 of the pink ball tour game at SCG.
Shami - 3/29
Bumrah - 2/33
Siraj - 1/26
Saini - 3/19 pic.twitter.com/imsodze0eB
">Sustained pressure from the Indian quicks and Australia A have been bowled out for 108. India lead by 86 runs.
— BCCI (@BCCI) December 11, 2020
20 wickets have fallen on Day 1 of the pink ball tour game at SCG.
Shami - 3/29
Bumrah - 2/33
Siraj - 1/26
Saini - 3/19 pic.twitter.com/imsodze0eBSustained pressure from the Indian quicks and Australia A have been bowled out for 108. India lead by 86 runs.
— BCCI (@BCCI) December 11, 2020
20 wickets have fallen on Day 1 of the pink ball tour game at SCG.
Shami - 3/29
Bumrah - 2/33
Siraj - 1/26
Saini - 3/19 pic.twitter.com/imsodze0eB
ವೇಗಿ ಮೊಹಮ್ಮದ್ ಸಿರಾಜ್ ಜೊತೆಗೂಡಿ 10ನೇ ವಿಕೆಟ್‌ಗೆ 71 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಬುಮ್ರಾ, ಟೀಂ ಇಂಡಿಯಾ ಪರ ಅಗ್ರ ಸ್ಕೋರರ್ ಎನಿಸಿದ್ರು. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 48.3 ಓವರ್‌ಗಳಲ್ಲಿ 194 ರನ್ಗಳಿಗೆ ಆಲ್ಔಟ್ ಆಗಿದೆ.
ಓದಿ ವಿರಾಟ್ ಕೊಹ್ಲಿ ಆಟ ಗಾಂಧಿ ತತ್ವಕ್ಕೆ ವಿರುದ್ಧವಾಗಿದೆ: ಗ್ರೆಗ್ ಚಾಪೆಲ್
ಭಾರತದ ಇನ್ನಿಂಗ್ಸ್ ನಂತರ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಕೂಡ ನೀರಸ ಪ್ರದರ್ಶನ ತೋರಿದೆ. ಟೀಂ ಇಂಡಿಯಾ ವೇಗಿಗಳ ದಾಳಿ ಎದುರಿಸಲಾಗದೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ್ರು.
32.2 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 108 ರನ್ ಗಳಿಸುವ ಮೂಲಕ 86 ರನ್‌ಗಳ ಹಿನ್ನಡೆ ಅನುಭವಿಸಿದೆ. ಭಾರತದ ಪರ ನವದೀಪ್ ಸೈನಿ 3, ಮೊಹಮ್ಮದ್ ಶಮಿ 3, ಬುಮ್ರಾ 2 ಮತ್ತು ಸಿರಾಜ್ 1 ವಿಕೆಟ್ ಪಡೆದಿದ್ದಾರೆ.